ಮಂಗಳೂರೂ: ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರದಿಂದ ಭಾನುವಾರ ಹೊರಟ ಭಾರತ ಶಿಕ್ಷಣ ರಥ ಯಾತ್ರೆ ಬುಧವಾರ ಮುಂಬೈ ತಲುಪಿದೆ. ಇಲ್ಲಿನ ಸಾಂತಕ್ರೂಜ್ ನ ಬಿಲ್ಲವ ಎಸೋಸಿಯೇಷನ್ ಸಭಾ ಭವನದ ಬಳಿ ಮುಂಬೈಯ ಶಿಕ್ಷಣಾಭಿಮಾನಿಗಳು ರಥಯಾತ್ರೆಯನ್ನು ಸ್ವಾಗತಿಸಿಕೊಂಡರು.ಬಳಿಕ ಬಿಲ್ಲವ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಮುಂಬೈ ಎಸೋಸಿಯೇಷನ್ ನ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅವರು ಮಾತನಾಡಿ ಸಮಾಜಕ್ಕೆ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಪ್ರಕಾಶ್ ಅಂಚನ್ ಅವರು ಈ ಮಹಾನ್ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ. ದೇಶದ ಪ್ರತಿಯೊಬ್ಬ ಬಡ ವಿದ್ಯಾರ್ಥಿಗೂ ಶಿಕ್ಷಣ ಸಿಗುವ ನಿಟ್ಟಿನಲ್ಲಿ ಬಂಟ್ವಾಳದಿಂದ ಹೊರಟ ರಥಯಾತ್ರೆ ಯಶಸ್ವಿಯಾಗಿ ದೆಹಲಿ ತಲುಪಲಿ ಎಂದು ಶುಭ ಹಾರೈಸಿದರು.dafe0b69-6da0-4d2e-8834-3de237b76c12

ರಥಯಾತ್ರೆಯಲ್ಲಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್, ಕಾರ್ಯದರ್ಶಿ ಪುರುಷೋತ್ತಮ ಅಂಚನ್, ಕೋಶಾಧಿಕಾರಿ ಸಂದೀಪ್ ಸಾಲ್ಯಾನ್ ಸದಸ್ಯರಾದ ರಾಮಚಂದ್ರ ಪೂಜಾರಿ, ದೀಪಕ್ ಸಾಲ್ಯಾನ್, ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಸದಸ್ಯರಾದ ನವೀನ್ ಸೇಸಗುರಿ, ಸಂತೋಷ್ ಕಟ್ಟೆ, ಅರ್ಜುನ್, ದಿಲೀಪ್ ಡೆಚ್ಚಾರ್, ಪ್ರವೀಣ್ ಅಲಂಗಾರು, ಸುರೇಶ್ ಪೂಜಾರಿ, ಚಂದ್ರಶೇಖರ ಆಚಾರಿಪಲ್ಕೆ, ಉದಯ ಕರೆಂಕಿ ಸಂಚರಿಸುತ್ತಿದ್ದಾರೆ.

aa17f8ed-4373-4804-9f21-e970339ced36

dde3de4e-b79d-497b-8d52-6b92e4f1d01f (1)

By suddi9

Leave a Reply

Your email address will not be published. Required fields are marked *