ಮಂಗಳೂರು: ಒಂದೇ ದೇಶ ಒಂದೇ ಶಿಕ್ಷಣ ಜಾರಿಗಾಗಿ ಬಂಟ್ವಾಳದ ಪೊಳಲಿ ಕ್ಷೇತ್ರದಿಂದ ಹೊರಟ ರಥಯಾತ್ರೆ 5 ನೇ ದಿನವಾದ ಗುರುವಾರ ರಾಷ್ಟ್ರ ಪಿತ ಮಹಾತ್ಮಗಾಂಧಿ ಹುಟ್ಟಿದ ನಾಡು ಗುಜರಾತ್ ಪ್ರವೇಶಿಸಿದ್ದು ಸೂರತ್ ನಲ್ಲಿ ಶಿಕ್ಷಣಾಭಿಮಾನಿಗಳು ಅದ್ದೂರಿಯ ಸ್ವಾಗತ ನೀಡಿದರು.
ಈ ಸಂದರ್ಭ ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ಮನೋಜ್ ಸಿ. ಪೂಜಾರಿ ಮಾತನಾಡಿ ಬಂಟ್ವಾಳದ ದಡ್ಡಲಕಾಡುವಿನಲ್ಲಿ ಮಾದರಿ ಸರಕಾರಿ ಶಾಲೆಯನ್ನು ನಿರ್ಮಿಸಿರುವ ಪ್ರಕಾಶ್ ಅಂಚನ್ ದೇಶದ ಪ್ರತೀ ವಿದ್ಯಾರ್ಥಿಗೂ ಸಮಾನ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ರಥಯಾತ್ರೆ ಆರಂಭಿಸಿದ್ದಾರೆ. ಇವರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.

ಭಾರತ ಶಿಕ್ಷಣ ಯಾತ್ರೆಯ ರುವಾರಿ ಪ್ರಕಾಶ್ ಅಂಚನ್ ಮಾತನಾಡಿ ಬಂಟ್ವಾಳದಿಂದ ಹೊರಟ ರಥಯಾತ್ರೆಗೆ ಗುಜರಾತ್ ನ ಶಿಕ್ಷಣಾಭಿಮಾನಿಗಳು ಉತ್ತಮ ಬೆಂಬಲ ನೀಡಿ ಪ್ರೋತ್ಸಾಹಿಸಿದ್ದಾರೆ. ಇದು ನಮ್ಮ ಹೋರಾಟಕ್ಕೆ ಇನ್ನಷ್ಟು ಬಲ ತುಂಬಲಿದೆ ಎಂದರು.ಈ ಸಂದರ್ಭ ಸೂರತ್ ನ ಕರ್ನಾಟಕ ಸಮಾಜದ ಅಧ್ಯಕ್ಷ ದಿನೇಶ್ ಬಿ. ಶೆಟ್ಟಿ, ಕಾರ್ಯದರ್ಶಿ ರಾಧಕೃಷ್ಣ ಮೂಲ್ಯ ಕೆ., ಗೌರವಾಧ್ಯಕ್ಚ ರಾಮಚಂದ್ರ ಬಿ.ಶೆಟ್ಟಿ, ಹೊಟೇಲ್ ಎಸೋಸಿಯೇಷನ್ ನ ಅಧ್ಯಕ್ಷ ಅರುಣ್ ಶೆಟ್ಟಿ, ಗುಜರಾತ್ ಬಿಲ್ಲವ ಸಮಾಜದ ಅಧ್ಯಕ್ಷ ಪ್ರಭಾಕರ ಎಸ್. ಪೂಜಾರಿ, ಕೋಶಾಧಿಕಾರಿ ರವೀಂದ್ರ ಎಸ್. ಸುವರ್ಣ, ಸೌಮ್ಯ ಪ್ರಭಾಕರ್ ಪದ್ಮಾವತಿ ಎಸ್., ಧನ್ಯ ರವೀಂದ್ರ, ಕುಸುಮಾ, ಹೇಮಾಲತಾ, ಸುಮಿತ್ರಾ, ಭಾನುಮತಿ, ಶ್ರೇಯಾ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ರಾಷ್ಟ್ರಧ್ವಜರೋಹಣ ನೆರವೇರಿಸಲಾಯಿತು. ಬಳಿಕ ಸೂರತ್ ರಾಜರಸ್ತೆಯಲ್ಲಿ ಮೆರವಣಿಗೆಯ ಮೂಲಕ ಸಾಗಿ ಬಂದು ಒಂದೇ ದೇಶ ಒಂದೇ ಶಿಕ್ಷಣ ಅಭಿಯಾನದ ಧ್ವಜ ಹಸ್ತಾಂತರಿಸುವ ಮೂಲಕ ಸೂರತ್ ನಿಂದ ಅಹಮದಬಾದ್ ಗೆ ಬೀಳ್ಕೊಟ್ಟರು.
