ವಿಟ್ಲ.ಜು:ವಿಠಲ ಪದವಿಪೂರ್ವ ಕಾಲೇಜಿನ 2019-20 ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಐ.ಎಸ್.ಒ ನ ಕನ್ಸಲ್ಟೆಂಟ್ ಮನೋಹರ ಪ್ರಭು ಉದ್ಘಾಟಸಿ ಮಾತನಾಡುತ್ತಾ ಇಂದಿನ ಡಿಜಿಟಲ್ ಯುಗದಲ್ಲಿ ಮನುಷ್ಯ ತನ್ನೆಲ್ಲ ಸಂಭಂದಗಳನ್ನು ಕಳಚಿಕೊಂಡು ಅನಾಥ ಪ್ರಜ್ಞೆ ಕಾಡುವ ಪರಿಸ್ಥಿತಿ ಬಂದಿದೆ. ವಿದ್ಯಾರ್ಥಿಗಳೇ ಕಾಲ ಎಷ್ಟೇ ಮುಂದುವರೆದರೂ ಸಂಬಂಧಗಳ ಮಹತ್ವ ಕಡಿಮೆಯಾಗಲಿಲ್ಲ, ಹಾಗಾಗಿ ನಮ್ಮ ಬದುಕಿನಲ್ಲಿ ಪ್ರತಿಯೋಂದು ಸಂಬಂಧಕ್ಕೂ ಬೆಲೆ ಕೊಟ್ಟು ನಿತ್ಯವು ಅಳವಡಿಸಿಕೊಂಡಾಗ ಮಾನವೀಯ ಸಂಬಂದಗಳು ಉಳಿಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

SHV_9295
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಠಲವಿದ್ಯಾ ಸಂಘದ ಸಂಚಾಲಕರಾದ ಎ.ಎನ್.ಕೂಡೂರು ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿ ಸಾಣೂರು ಪ್ರಕೃತಿ ಸಮೂಹ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಹಾಗೂ ವಿಠಲ ವಿದ್ಯಾ ಸಂಸ್ಥೆಯ ಹಳೆವಿದ್ಯಾರ್ಥಿ ಅಶೋಕ್ ಕುಮಾರ್, ಸಂಸ್ಥೆಯ ಕೋಶಾಧಿಕಾರಿ ನಿತ್ಯಾನಂದ ನಾಯಕ್, ಸದಸ್ಯರಾದ ಬಾಬು ಕೆ.ವಿ, ಪದ್ಮಯ್ಯ ಗೌಡ, ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಾಡಿ, ಮೂಡಬಿದಿರೆಯ ಜಿಮ್ ತರಬೇತುದಾರ ವಿಜಯ್ , ವಿಟ್ಲ ಸುಪ್ರಜಿತ್ ಐಟಿಐ ನ ಕಾರ್ಯದರ್ಶಿ ಪ್ರಕಾಶ್ ಕುಕ್ಕಿಲ, ನಿವೃತ್ತ ಪ್ರಾಂಶುಪಾಲ ರಘುರಾಮ್ ಶಾಸ್ತ್ರಿ ಉಪಸ್ಥಿತರಿದ್ದರು.

SHV_9321
ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಕಾರ್ತಿಕ್, ಉಪಾಧ್ಯಕ್ಷ ಮಹೇಶ್,ಕಾರ್ಯದರ್ಶಿ ದಿವ್ಯಶ್ರೀ, ಜತೆಕಾರ್ಯದರ್ಶಿ ವೈಷ್ಣವಿ ಆಯ್ಕೆಯಾದರು. ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಸ್ವಾಗತಿಸಿ ,ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಉಪನ್ಯಾಸಕಿ ಸಂಪಾವತಿ, ಆಶಾ ಅತಿಥಿಗಳ ಪರಿಚಯಿಸಿದರು. ಉಪನ್ಯಾಸಕಿ ವಿಶ್ವಕುಮಾರಿ , ರಕ್ಷಿತಾ ರೈ ಸಹಕರಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಉಪನ್ಯಾಸಕಿ ಅರುಣ ಕುಮಾರಿ ವಂದಿಸಿ, ಉಪನ್ಯಾಸಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *