ಬಂಟ್ವಾಳ: ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಒಂದು ಕೋಟಿ ಮುವತ್ತು ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡ  ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಹಸ್ತಾಂತರಿಸಲಾಯಿತು.
ಮಂಚಿ,ಇರಾ,ಕೊಲ್ನಾಡು,ಸಾಲೆತ್ತೂರು ಗ್ರಾಮ ಪಂಚಾಯತ್ ಗಳ  ವ್ಯಾಪ್ತಿಗೆ  ಈ ಆರೋಗ್ಯ ಕೇಂದ್ರ   ಒಳಪಡಲಿದ್ದು ,ವೈದ್ಯಾಧಿಕಾರಿಗಳಾದ  ಡಾ ಕ್ರಷ್ಣ ಮೂರ್ತಿಯವರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು. IMG-20190720-WA0134
  ಈ ಸಂದರ್ಭ  ಜಿಲ್ಲಾ ಪಂಚಾಯತ್ ಸದಸ್ಯ ಎಮ್ ಎಸ್ ಮಹಮ್ಮದ್, ತಾಲ್ಲೂಕು ಪಂಚಾಯತ್ ಉಪಾದ್ಯಕ್ಷ ಅಬ್ಬಾಸ್ ಅಲಿ, ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷೆ   ಪ್ರಮೀಳ ,ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ವೈದ್ಯಾಧಿಕಾರಿ ಡಾಕ್ಟರ್ ರೋಹಿಣಿ,ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ಜಿ ಎಮ್, ಮೊಯ್ದೀನ್ ಕುಂಞಿ,  ಪುಷ್ಪ ಕಾಮತ್,  ಪ್ರತಿಮ, ಗುತ್ತಿಗೆದಾರರಾದ ಪುಶ್ಪರಾಜ್ ಶೆಟ್ಟಿ ಮೊದಲಾದವರಿದ್ದರು.IMG-20190720-WA0133

By Suddi9

Leave a Reply

Your email address will not be published. Required fields are marked *