ಬಂಟ್ವಾಳ: ಉದ್ಘಾಟನೆಗೊಂಡು ಇನ್ನು ಜನರ ಉಪಯೋಗಕ್ಕಿಲ್ಲದೆ ಅನಾಥವಾಗಿರುವ ಬಂಟ್ವಾಳ ಕೊಟ್ರಮಣಗಂಡಿಯ ಬಸ್ ತಂಗುದಾಣದ ಮೇಲೆ ಬೃಹತ್ ಗಾತ್ರದ ಮರವೊಂದು ವಾಲಿನಿಂತಿದೆ. ಶುಕ್ರವಾರ ಬೆಳಗ್ಗಿನಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಸ್ ತಂಗುದಾಣದ ಹಿಂಬದಿಯಲ್ಲಿ  ನೀರುಹರಿಯುವ ತೋಡಿನಲ್ಲಿ ಬೆಳೆದ ಬೃಹತ್ ಗಾತ್ರದ ಮರ ಬಸ್ ತಂಗುದಾಣದ ಮೇಲೆಯೇ ಎರಗಿ ನಿಂತಿದೆ.  ಪರಿಣಾಮ ಬಸ್ ತಂಗುದಾಣಕ್ಕೆ ಯಾವುದೇ ಹಾನಿಯಾಗದಿದ್ದರೂ,ಮರದ ಕೊಂಬೆ ತಂಗುದಾಣವನ್ನು ಅವರಿಸಿ ನಿಂತಿದೆ.ಪಕ್ಕದ ಆಟಕ್ಕುಂಟು ಲೆಕ್ಕಕ್ಕಿಲದಂತಿರುವ ಸಾರ್ವಜನಿಕ ಶೌಚಾಲಯ ಕೂಡ ಮರದ ಗೆಲ್ಲಿನಿಂದಾಗಿ ಮರೆಯಾಗಿದೆ. ಈ ಬಸ್ ತಂಗುದಾಣ ನಿರ್ಮಾಣವಾಗಿ ಉದ್ಘಾಟನೆಗೊಂಡು ದಶಕ ಸಮೀಪಿಸಿದರೂ ಇನ್ನು ಕೂಡ ಸಾರ್ವಜನಿಕರ ಉಪಯೋಗಕ್ಕೆ ಬರಲಿಲ್ಲ,ಇದು ಮಾತ್ರವಲ್ಲ ತಂಗುದಾಣದ ಪಕ್ಕದಲ್ಲೇ ಹೆಸರಾಂತ ಕಂಪೆನಿಯೊಂದು ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿಕೊಟ್ಟಿದ್ದು,ಅದು ಕೂಡ ಉದ್ಘಾಟನೆಯಾದರೂ,ಇದುವರೆಗೂ ಜನರ ಉಪಯೋಗಕ್ಕೆ ಸಿಗಲಿಲ್ಲ,ಸದ್ಯ ಈ ಬಸ್ ತಂಗಿದಾಣ ಬಿಕ್ಷುಕರ ತಾಣವಾಗಿದ್ದು,ಈಗಾಗಲೇ ಇಬ್ಬರು ಅಪರಿಚಿತ ಬಿಕ್ಷುಕರು ಈ ತಂಗುದಾಣದಲ್ಲಿ ಸಾವನ್ನಪ್ಪಿದರು.ಆದರೂ ಪುರಸಭೆ ಈ ಬಸ್ ತಂಗುದಾಣವನ್ನು ಸದುಪಯೋಗಪಡಿಸುವ ನಿಟ್ಟಿನಲ್ಲಿ ಮನಸ್ಸು ಮಾಡಲಿಲ್ಲ.     IMG_20190719_142258
                
ಬಾರದ ಬಸ್ ಗಳು:
ಬಿ.ಸಿ.ರೋಡಿನಿಂದ ಬಂಟ್ವಾಳ ಮಾರ್ಗವಾಗಿ ಮೂಡಬಿದ್ರೆ,ವಾಮದಪದವು ಹೀಗೆ ಈ ಭಾಗದಲ್ಲಿ ಸಂಚರಿಸುವ ಖಾಸಗಿ ಬಸ್ ಗಳು ಈಗ ಕೊಟ್ರಮಣಗಂಡಿಯ ರಸ್ತೆಯಲ್ಲಿಯೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿ,ಇಳಿಸುತ್ತಿದೆ.ಇದರಿಂದಾಗಿ ಅಗಲ ಕಿರಿದಾದ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಕೊಟ್ರಮಣಗಂಡಿ ತಿರುವು ಬಳಿ ದಿನೇಶ್ ಭಂಡಾರಿ ಪುರಸಭಾಧ್ಯಕ್ಷರಾಗಿದ್ದ ಕಾಲದಲ್ಲಿ ಬಸ್ ತಂಗುದಾಣ ನಿರ್ಮಿಸಲಾಗಿತ್ತು.ಆದರೆ ಈವರೆಗೂ ಒಂದೇ ಒಂದು ಬಾರಿ ಬಸ್ ಗಳು ಈ ತಂಗುದಾಣವನ್ನು ಪ್ರವೇಶಿಸಿಲ್ಲ.ಈಗ ಬಸ್ ಗಳು ನಿಲುಗಡೆಯಾಗುವ ಸ್ಥಳದಲ್ಲಿ ಈಗಲೂ ಪ್ರತಿನಿತ್ಯ ಟ್ರಾಫಿಕ್ ಜಾಮ್ ಆಗುತ್ತಲೇ ಇದೆ.ಪುರಸಭೆಯ ಸಾಮಾನ್ಯಸಭೆಗಳಲ್ಲಿಹಾಗೆಯೇ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಕೂರಿಸಿ ಬಸ್ ತಂಗುದಾಣಕ್ಕೆ ಬಸ್ ನ್ನು ಪ್ರವೇಶಿಸುವ ದೆಸೆಯಲ್ಲಿ ಸಾಕಷ್ಟು ಚರ್ಚೆ ನಡೆದಿದ್ದರೂ,ಬಸ್ ಗಳು ಮಾತ್ರ ಈ ತಂಗುದಾಣದೊಳಗೆ ಎಂಟ್ರಿಯೇ ಆಗಿಲ್ಲ,ಈ ನಿಟ್ಟಿನಲ್ಲಿ ಪುರಸಭೆ,ಟ್ರಾಫಿಕ್ ಪೊಲೀಸರು ಕೂಡ  ನಿರಮ್ಮಳಾಗಿದ್ದಾರೆ.
ಕಾಂಕ್ರೆಟ್ : ವಿಶೇಷವೆಂದರೆ ಕಳೆದ ವಾರ ಈ ಬಸ್ ತಂಗುದಾಣದ ಆರ್ಧಭಾಗದಷ್ಟು ಕಾಂಕ್ರೇಟಿಕರಣದ ಕಾಮಗಾರಿ ನಡೆದಿದ್ದು,ನಂತರವಾದರೂ ಈ ರಸ್ತೆಯಲ್ಲಿ ಓಡಾಡುವ ಬಸ್ ಗಳು ತಂಗುದಾಣ ಪ್ರವೇಶಿಸಬಹುದೆ ಎಂಬ ಆಶಾಭಾವನೆ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

By Suddi9

Leave a Reply

Your email address will not be published. Required fields are marked *