ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಅನಾಥ ದಿವ್ಯಾಂಗ ಚೇತನ ಯುವಕನನ್ನು ಉಡುಪಿಯ ಸಮಾಜಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ, ತಾರಾನಾಥ್ ಮೇಸ್ತ ಶಿರೂರು ಅವರು ಆಸ್ಪತ್ರೆಯಿಂದ ಬಿಡುಗೊಳಿಸಿ ಬ್ರಹ್ಮಾವರದ ‘ಅಪ್ಪ- ಅಮ್ಮ’ ಅನಾಥಾಲಯದಲ್ಲಿ ಭಾನುವಾರ ಪುರ್ವಸತಿ ಕಲ್ಪಿಸಿದ್ದಾರೆ. ಅನಾಥಾಲಯದ ಸಂಚಾಲಕ ಪ್ರಶಾಂತ್ ಪೂಜಾರಿ ಕೂರಾಡಿ ಅವರು ದಿಕ್ಕಿಲ್ಲದ ದಿವ್ಯಾಂಗ ಯುವಕನಿಗೆ ಆಶ್ರಯ ನೀಡಿ ಮಾನವಿಯತೆ ಮೆರೆದಿದ್ದಾರೆ.e1f43c94-03c9-494e-8e02-1b3a8b2e158b

ಸೊಂಟದ ಸ್ವಾಧೀನ, ಎರಡು ಕೈಗಳಲ್ಲಿ ಬಲ ಇಲ್ಲದ ಹುಟ್ಟು ಅಂಗವಿಕಲ ಯುವಕನು ಮೈಸೂರು ನಂಜನಗೂಡಿನ ಕುಮಾರ್ (32 ವ), ತಂದೆ ತಾಯಿ ಮೃತಪಟ್ಟಿದ್ದಾರೆ, ಎಂದು ತಿಳಿದು ಬಂದಿದೆ. ಸೊಂಟದ ಸ್ವಾಧೀನ, ಎರಡು ಕೈಗಳಿಗೆ ಬಲ ಇಲ್ಲದೆ ಹುಟ್ಟು ಅಂಗವಿಕಲ ಆಗಿರುವ ಯುವಕನು ಹೆತ್ತವರ ಅವಲಂಬಿಸಿ ನಿತ್ಯದ ದಿನಚರಿ ಸಾಗಿಸುತ್ತಿದ್ದನು. ಹೆತ್ತವರ ಅಗಲಿಕೆಯಿಂದಾಗಿ ಜೀವನ ಸಾಗಿಸಲು ಯುವಕನು ಅಸಹಾಯಕನಾಗ ಬೇಕಾಯಿತು. ಹಾಗಾಗಿ ಯುವಕನು ಮನನೊಂದು ಊರು ಬಿಟ್ಟು ಬಂದು ಉಡುಪಿಯಲ್ಲಿ ನೆಲೆ ಕಂಡಿದ್ದನು. ಹೀಗಿರುವಾಗ ಇಲ್ಲಿ ಆತನಿಗೆ ಸಮಯಕ್ಕೆ ಸರಿಯಾಗಿ ಸೇವನೆಗೆ ಆಹಾರ ಸಿಗದೆ ಆರೋಗ್ಯವು ಹದಗೆಟ್ಟಿತು. ಕೆಲವು ದಿನಗಳ ಹಿಂದೆ ಯುವಕ ದೈಹಿಕ ತ್ರಾಣ ಕಳೆದುಕೊಂಡು, ರಾಷ್ಟ್ರಿಯ ಹೆದ್ದಾರಿಯಲ್ಲಿ ಅಸ್ವಸ್ಥಗೊಂಡು ಬಿದ್ದು ಕೊಂಡಾಗ, ಸಮಾಜಸೇವಕರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದರು.

ವಿಕಲಚೇತನರ ಸಬಲೀಕರಣ ಇಲಾಖೆಯು ನಿರ್ಗತಿಕ ವಿಕಲಚೇತನ ಯುವಕನಿಗೆ ನೆರವಾಗುವಂತೆ ಸಾಮಾಜಿಕ ಜಾಲತಾಣದ ಮೂಲಕ ವಿವರನೀಡಿ ಮನವಿ ಮಾಡಲಾಗಿತ್ತು. ಆದರೆ ಇಲಾಖೆಯಿಂದ ಯಾವೊಂದು ಸ್ಪಂದನೆ ದೊರೆಯಲಿಲ್ಲವೆಂದು ಸಮಾಜಸೇವಕರು ದೂರಿದ್ದಾರೆ. ನಾಗರಿಕ ಸಮಾಜದಲ್ಲಿ ವಿಕಲಚೇತನ ಯುವಕನು ಅಸಹಾಯಕನಾಗಿ ದಿನಕಳೆಯುತ್ತಿರುವಾಗ ಸಮಸ್ಯೆ ಸಂಬಂಧಪಟ್ಟ ಇಲಾಖೆ ನೆರವಿಗೆ ಬಾರದಿದ್ದು ವಿಪರ್ಯಾಸದ ಸಂಗತಿ. ಇಂತಹ ಸಂದರ್ಭದಲ್ಲಿ ನಮ್ಮ ಮನವಿಗೆ ಬ್ರಹ್ಮಾವರದ ಅಪ್ಪ- ಅಮ್ಮ ಅನಾಥಾಲಯದ ಸಂಚಾಲಕ ಪ್ರಶಾಂತ್ ಪೂಜಾರಿ ಕೂರಾಡಿ ಸ್ಪಂದಿಸಿ ಯುವಕನಿಗೆ ಆಶ್ರಯ ನೀಡಿದ್ದು ಸಂತೋಷ ನೀಡಿತೆಂದು ಸಮಾಜಸೇವಕ ವಿಶು ಶೆಟ್ಟಿ ಅವರು ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *