ಬಂಟ್ವಾಳ: ಸದಸ್ಯತ್ವ ಅಭಿಯಾನಯಾದ ವಿಸ್ತಾರಕರ ಕಾರ್ಯಾಗಾರವು ಬಿ.ಜೆ.ಪಿ ಕಛೆರಿಯಲ್ಲಿ ಕ್ಷೇತ್ರ ಬಿ.ಜೆ.ಪಿ ಅಧ್ಯಕ್ಷರಾದ ದೇವದಾಸ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಭಾನುವಾರ ಜರುಗಿತು. ಜಿಲ್ಲಾ ಸದಸ್ಯತ್ವ ಅಭಿಯಾನದ ಸಂಚಾಲಕರಾದ ಶ್ರೀ ಗೋಪಾಲಕೃಷ್ಣ ಹೇರಳೆ ವಿಸ್ತಾರಕರ ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಿದರು. ಪಕ್ಷದ ಸಂಘಟನೆಗೆ ಪೂರಕವಾಗಿ ಈ ಸದಸ್ಯತ್ವ ಅಭಿಯಾನ ಪ್ರಮುಖ ಘಟ್ಟವಾಗಿದ್ದು ಈ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಕನಿಷ್ಟ 200 ಸದಸ್ಯರನ್ನು ಹೊಸದಾಗಿ ಸದಸ್ಯರನ್ನಾಗಿ ನೊಂದಾವಣೆ ಮಾಡಿಸುವಲ್ಲಿ ವಿಸ್ತಾರಕರ ಜವಾಬ್ದಾರಿ ಮಹತ್ವದು ಎಂದು ಹೇಳಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೆಶ್ ಚೌಟ, ರಾಜ್ಯ ಸಹ ವಕ್ತಾರೆ ಸುಲೋಚನ ಜಿ.ಕೆ ಭಟ್, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಜಿಲ್ಲಾವಕ್ತಾರ ಹರಿಕೃಷ್ಣ ಬಂಟ್ವಾಳ, ಕ್ಷೇತ್ರದ ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಕ್ಷೇತ್ರ ಸಂಚಾಲಕರಾದ ದೇವಪ್ಪ ಪೂಜಾರಿ, ಸಹ ಸಂಚಾಲಕರಾದ ಅಭಿಷೇಕ್ ರೈ ಉಪಸ್ಥಿತರಿದ್ದರು.
