ಬಂಟ್ವಾಳ : ಮನುಷ್ಯ ತಾನು ಸೇವೆ ಸಲ್ಲಿಸುವ ಇಲಾಖೆಯಲ್ಲಿ ಮೇಲು-ಕೀಳಿಲ್ಲದೆ ಆಸೆ,ಅಕಾಂಕ್ಸೆಗಳಿಗೆ ಬಲಿಯಾಗದೆ,ತನ್ನ ಆತ್ಮಸಾಕ್ಷಿಗೆ ತಕ್ಕಂತೆ ಪ್ರಾಮಾಣಿಕವಾಗಿ ಸಲ್ಲಿಸಿದ ಸೇವೆಯೇ ಶ್ರೇಷ್ಟ ಸೇವೆ ಎಂದು ಬಂಟ್ವಾಳ ತಾಪಂ ಸದಸ್ಯ ಪ್ರಭಾಕರ ಪ್ರಭು ಹೇಳಿದ್ದಾರೆ. ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ಪೆ ಅಂಚೆ ಕಚೇರಿ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿದ ಜಿನಶ್ರೀ ಎಂಬವರಿಗೆ ಕರ್ಪೆ ಸಮಾಜ ಮಂದಿರದಲ್ಲಿ ನಡೆದ ಗೌರವ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಸಮಾಜಮುಖಿ ಕೆಲಸಕ್ಕೆ ಸಮಾಜದಿಂದ ಗೌರವಿಸಲ್ಪಡುವಾಗ ಜೀವನ ಸಾರ್ಥಕ ವಾಗುತ್ತದೆ ಎಂದು ಹೇಳಿದರು.
ಮುಖ್ಯ ಅಥಿತಿಯಾಗಿದ್ದ ನಿವೃತ್ತ ಶಾಲಾ ಪರಿವೀಕ್ಷಣಾ ಅಧಿಕಾರಿ ನಾರಾಯಣ ನಾಯಕ್ ಮಾತಾಡಿ ಸರಕಾರಿ ನೌಕರರು ನಿವೃತ್ತಿ ನಂತರವೂ ಸಮಾಜ ಸೇವೆಯತ್ತ ಮುಖ ಮಾಡುವುದರಿಂದ ಆರೋಗ್ಯ ಸೇರಿದಂತೆ ಮನಸ್ಸಿಗೆ ನೆಮ್ಮದ್ದಿ ಸಿಗಲು ಸಾದ್ಯ ಎಂದರು.
ಅಂಗನವಾಡಿ ಇಲಾಖೆ ಯ ಮೆಲ್ವೀಚಾರಕಿ ನೀತಾ ಮಾತಾಡಿ ದೇವರ ಗುಣದಂತೆ ಇರುವ ಪುಟಾಣಿ ಮಕ್ಜಳ ಸೇವೆ ಮಾಡುವ ಭಾಗ್ಯ ಮಹತ್ವದ ಕಾರ್ಯ ಎಂದರು.
ಗ್ರಾಮ ಪಂಚಾಯತ್ ಸದಸ್ಯರಾದ ದೇವಪ್ಪ ಕರ್ಕೆರ,ಶೇಖರ ನಾಯ್ಕ,ಸುಭಾಕ್ಷಿಣಿ.,ಪಂಜಿಕಲ್ಲು ಆರೊಗ್ಯ ಸಹಾಯಕಿ ಗೀತಾ, ಸಿದ್ದಕಟ್ಟೆ ರೋಟರಿ ಸಮುದಾಯ ದಳದ ಅದ್ಯಕ್ಷ ಮಧ್ವರಾಜ್ ಜೈನ್ ಶುಭ ಹಾರೈಸಿದರು.
ಅಭಿನಂದನೆ ಸ್ವೀಕರಿಸಿದ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಜಿನಶ್ರೀ ತನಗೆ ಗ್ರಾಮಸ್ತರು ನೀಡಿದ ಸೇವೆ ಗೆ ಅಭಾರಿಯಾಗಿದ್ದೆನೆ ಎಂದರು.
ಸಮಾರಂಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಲೀಲಾ,ಸಹಾಯಕಿ ಸಂದ್ಯಾ ಪ್ರಭು, ಪ್ರಮುಖರಾದ .ಕೆ.ರಾಮಕ್ರಷ್ಟ್ನ ನಾಯಕ್,ವೆಂಕಟೇಶ ನಾಯಕ್ ,ನವೀನ ಪೂಜಾರಿ ,ಕರ್ಪೆ ಅಂಚೆ ಕಚೇರಿ ಪೊಸ್ಟ್ ಮಾಸ್ಟರ್ ಗಣೆಶ್ ,. ಶಿಕ್ಸಕ ಭರತ್ ಜೈನ್, ರಮೆಶ್ ಶೆಣೈ,ಅಶಾ ಕಾರ್ಯಕರ್ತೆ ಭಾನುಮತಿ ಭಟ್,ಮಾಜಿ ಗ್ರಾ.ಪ.ಸದಸ್ಯೆ ಮಲ್ಲಿಕಾ,ಜನರ್ದಾನ ಪ್ರಭು,ಅಲ್ಲದೆ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
ಅಂಗನವಾಡಿ ಕಾರ್ಯಕರ್ತೆಯಾರಾದ ಲೀಲಾ ಸ್ವಾಗತಿಸಿ, ಕುಮಾರಿ ಕಾರ್ಯಕ್ರಮ ನಿರೂಪಿಸಿದರು.
ಗೋಪಾಲ ಕ್ರಷ್ಣ ಪ್ರಭು ವಂದಿಸಿದರು.

