ಬಂಟ್ವಾಳ:ಜಗತ್ತಿನ ಒಟ್ಟು 220 ದೇಶಗಳಲ್ಲಿ 33ಸಾವಿರ ಕ್ಲಬ್ ರಚಿಸಿಕೊಂಡು ಸುಮಾರು 12ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿರುವ ಅಂತರ್ ರಾಷ್ಟ್ರೀಯ ಮಟ್ಟದ ಸೇವಾ ಸಂಸ್ಥೆಯಲ್ಲಿ ಪರಸ್ಪರ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಂಡು ಬಡಜನರ ಕಣ್ಣೀರು ಒರೆಸುವ ಮೂಲಕ ನೈಜ ಬದುಕು ಕಂಡುಕೊಳ್ಳಲು ಸಾಧ್ಯವಿದೆ ಎಂದು ಮೂಡುಬಿದ್ರೆ ರೋಟರಿ ಕ್ಲಬ್ ಅಧ್ಯಕ್ಷ ಸಿ.ಎಚ್.ಅಬ್ದುಲ್ ಗಫೂರ್ ಹೇಳಿದ್ದಾರೆ.ಇಲ್ಲಿನ ಸಿದ್ಧಕಟ್ಟೆ ರೋಟರಿ ಸಮುದಾಯ ದಳ ವತಿಯಿಂದ ಶನಿವಾರ ಸಂಜೆ ಏರ್ಪಡಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಪದಾದಿಕಾರಿಗಳು ಮತ್ತು ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದ ಬಳಿಕ ಅವರು ಮಾತನಾಡಿದರು. ಈಗಾಗಲೇ ಪೋಲಿಯೋ ನಿನರ್ಾಮ ಮತ್ತು ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುತ್ತಿರುವ ರೋಟರಿ ಕ್ಲಬ್ ಕಳೆದ 52 ವರ್ಷಗಳಿಂದ ಮೂಡುಬಿದ್ರೆಯಲ್ಲಿ ಸಾಮಾಜಿಕ ಚಟುವಟಿಕೆ ಜೊತೆಗೆ ಶಿಕ್ಷಣ ಸಂಸ್ಥೆ ಆರಂಭ, 125ಕ್ಕೂ ಮಿಕ್ಕಿ ಮಹಿಳಾ ಶೌಚಾಲಯ ನಿಮರ್ಾಣ, ಬ್ಲಡ್ ಬ್ಯಾಂಕ್ ರಚಿಸಿದೆ. ಇದೀಗ ಅಂತರ್ಜಲ ವೃದ್ಧಿಗೆ ರೂ 1.20 ಕೋಟಿ ವೆಚ್ಚದಲ್ಲಿ 18 ಕೆರಗಳ ದುರಸ್ತಿಗೆ ಮುಂದಾಗಿದೆ ಎಂದರು.14btl-Siddakatte

ರೋಟರಿ ಸಮುದಾಯ ದಳ ನೂತನ ಅಧ್ಯಕ್ಷ ಮಧ್ವರಾಜ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮೂಡುಬಿದ್ರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಯುವರಾಜ್ ಜೈನ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಸಾಧನೆ ದೇವರು ಅಪರಿಮಿತ ಶಕ್ತಿ ಮತ್ತು ಸಾಮಥ್ರ್ಯ ಕರುಣಿಸಿದ್ದಾರೆ. ಇದಕ್ಕಾಗಿ ಸೀಮಿತ ಅವಧಿಯ ಬದುಕು ಸಾರ್ಥಕಗೊಳಿಸಲು ಸಮಾಜ ಸೇವೆ ಜೊತೆಗೆ ಆತ್ಮಸ್ಥೈರ್ಯದಿಂದ ಮುನ್ನುಗ್ಗಿ ಸಾಧನೆಯ ಮೆಟ್ಟಿಲು ಏರುವ ಪ್ರಯತ್ನ ನಿರಂತರ ನಡೆಯಬೇಕು ಎಂದರು. ಆರ್ಸಿಸಿ ಚೇರ್ಮನ್ ಜೆರಾಲ್ಡ್ ಡಿಸೋಜ ಶುಭ ಹಾರೈಸಿದರು. ಇದೇ ವೇಳೆ ಅಧಿಕಾರ ಹಸ್ತಾಂತರ ಮತ್ತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪ್ರಮುಖರಾದ ಎಸ್.ವಾಸುದೇವ ಆಚಾರ್ಯ, ಮೈಕಲ್ ಡಿಕೋಸ್ತ, ಎಚ್.ಎ.ರಹಿಮಾನ್, ದಾಮೋದರ ಶೆಟ್ಟಿಗಾರ್ ಇವರನ್ನು ಸನ್ಮಾನಿಸಲಾಯಿತು.

ನಿಕಟಪೂರ್ವ ಕಾರ್ಯದಶರ್ಿ ಎಚ್.ಎ.ರಹಿಮಾನ್, ಆರ್ಸಿಸಿ ಚೇರ್ಮನ್ ದಾಮೋದರ ಶೆಟ್ಟಿಗಾರ್ ಮತ್ತಿತರರು ಇದ್ದರು. ಮಾಜಿ ಅಧ್ಯಕ್ಷ ಡಾ.ಕೃಷ್ಣಮೂತರ್ಿ, ಉಪನ್ಯಾಸಕ ವಿನಯಚಂದ್ರ, ಪಿಡಿಒ ಗಣೇಶ ಶೆಟ್ಟಿ, ಮಾಜಿ ಕಾರ್ಯದಶರ್ಿ ಭೋಜ ಮತ್ತಿತರರು ಅತಿಥಿಗಳನ್ನು ಪರಿಚಯಿಸಿದರು.ನಿಕಟಪೂರ್ವ ಅಧ್ಯಕ್ಷ ಎಸ್.ವಾಸುದೇವ ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನೂತನ ಕಾರ್ಯದಶರ್ಿ ಭರತ್ ಕುಮಾರ್ ಜೈನ್ ವಂದಿಸಿದರು. ಉಪನ್ಯಾಸಕ ಡಾ.ಯೋಗೀಶ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು. ರಾಜೇಶ ನೆಲ್ಯಾಡಿ ಮತ್ತು ಮಂದಾತರ್ಿ ಶೆಟ್ಟಿ ಸಹಕರಿಸಿದರು.

By Suddi9

Leave a Reply

Your email address will not be published. Required fields are marked *