ಬಂಟ್ವಾಳ:ತಾಲ್ಲೂಕಿನ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕ- ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ಪ್ರಭಾಕರ ದೈವಗುಡ್ಡೆ ಆಯ್ಕೆಯಾಗಿದ್ದಾರೆ.ಬಿ.ಸಿ.ರೋಡಿನಲ್ಲಿ ಸಂಘದ ಹಾಲಿ ಅಧ್ಯಕ್ಷ ವಿಠಲ ರೈ ಮಧ್ವಗುತ್ತು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ 36ನೇ ವಾರ್ಷಿಕ ಮಹಾ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಂಚಾಲಕರಾಗಿ ಕೃಷ್ಣ ಅಲ್ಲಿಪಾದೆ, ಉಪಾಧ್ಯಕ್ಷರಾಗಿ ಪುರುಷೋತ್ತಮ ನಾಟಿ, ಬಿ. ಸುರೇಶ್ ಬಂಗೇರ ಸಂಚಯಗಿರಿ, ವ್ಯಾನು ಚಾಲಕರ ವಿಭಾಗದ ಅಧ್ಯಕ್ಷರಾಗಿ ಸದಾನಂದ ಹಳೇಗೇಟು, ಪ್ರಧಾನ ಕಾರ್ಯದರ್ಶಿಯಾಗಿ ವಿನ್ಸೆಂಟ್ ರೊಡ್ರಿಗಸ್ ಫರ್ಲ, ಜೊತೆ ಕಾರ್ಯದರ್ಶಿಯಾಗಿ ಲತೀಫ್ ಕೈಕುಂಜೆ, ಕೋಶಾಧಿಕಾರಿಯಾಗಿ ತಿಮ್ಮಪ್ಪ ಪೂಜಾರಿ ಸಿದ್ದಕಟ್ಟೆ ಆಯ್ಕೆಯಾಗಿದ್ದಾರೆ ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *