ಬಂಟ್ವಾಳ:ತೆಂಕು ತಿಟ್ಟು ಯಕ್ಷಗಾನ ರಂಗದ ಹಿಮ್ಮೇಳ ಶಿಕ್ಷಣ ಮೂಲಕ ಸುಮಾರು 3ಸಾವಿರಕ್ಕೂ ಮಿಕ್ಕಿ ವ್ಯಂದಿ ಶಿಷ್ಯರನ್ನು ಹೊಂದಿರುವ ಹಿಮ್ಮೇಳ ಕಲಾವಿದ, ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರಿಗೆ ಕನರ್ಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಒಲಿದಿದೆ.ಕಳೆದ 50 ವರ್ಷಗಳ ಹಿಂದೆ ತೆಂಕುತಿಟ್ಟಿನ ಹಿಮ್ಮೇಳ ಕಲಾವಿದರಾಗಿ ಗುರುತಿಸಿಕೊಂಡ ಮಾಂಬಾಡಿ ಅವರು ಪ್ರಸಕ್ತ ಬಹುತೇಕ ಎಲ್ಲಾ ಮೇಳಗಳಲ್ಲಿ ಶಿಷ್ಯಂದಿರನ್ನು ಹೊಂದಿದ್ದಾರೆ.

10btl-Mambady (1)
ರಾಜ್ಯಪ್ರಶಸ್ತಿ ಪುರಸ್ಕೃತ ದಿವಂಗತ ಮಾಂಬಾಡಿ ನಾರಾಯಣ ಭಾಗವತರ ಪುತ್ರನಾಗಿ ಜನಿಸಿ ತನ್ನ 14ನೇ ವಯಸ್ಸಿನಿಂದಲೇ ಕಟೀಲು ಮೇಳದಲ್ಲಿ ವೃತ್ತಿ ಜೀವನ ಆರಂಭಿಸಿದ್ದರು.ಆರಂಭದಲ್ಲಿ ತನ್ನ ತಂದೆಯಿಂದಲೇ ಯಕ್ಷಗಾನ ಅಭ್ಯಾಸ ಆರಂಭಿಸಿದ ಇವರು ಬಳಿಕ ಕುದ್ರೆಕೋಡ್ಲು ರಾಮ ಭಟ್ಟ, ನಿಡ್ಲೆ ನರಸಿಂಹ ಭಟ್ಟರ ನೆಚ್ಚಿನ ಶಿಷ್ಯರಾಗಿದ್ದರು. ‘ಸುಬ್ಬಣ್ಣ’ ಮೃದಂಗ ನಡೆಗಳನ್ನು ಅಭ್ಯಸಿಸಿ ಬಳಿಕ ಕಾಂಚನ ರಾಮ ಭಟ್ಟರು ಹೀಗೆ ವಿವಿಧ ಆಯಾಮಗಳಲ್ಲಿ ಹಿಮ್ಮೇಳ ಕರಗತಗೊಳಿಸಿ ಹಲವಾರು ಮೇಳಗಳಲ್ಲಿ ಕೃಷಿ ನಡೆಸಿದ್ದಾರೆ. ಪ್ರಸಕ್ತ ಜಿಲ್ಲೆ ಮಾತ್ರವಲ್ಲದೆ ಕಾಸರಗೋಡು ಜಿಲ್ಲೆಯಲ್ಲಿಯೂ ಇವರ ಹಿಮ್ಮೇಳ ತರಗತಿ ನಡೆಯುತ್ತಿದೆ.

By suddi9

Leave a Reply

Your email address will not be published. Required fields are marked *