ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹಿಂಭಾಗದಲ್ಲಿ ಹಣವನ್ನು ಪಣವಾಟ್ಟು ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಮಂಗಳವಾರ ಸಂಜೆ ದಾಳಿ ನಡೆಸಿದ್ದಾರೆ, ಈ ಸಂದರ್ಭ ಉಲಾಯಿ-ಪಿದಾಯಿ ಆಟದಲ್ಲಿ ನಿರತರಾಗಿದ್ದ ವಸಂತ, ಶೀನ, ಯಶೋಧರ, ಶೇಖರ ಪೂಜಾರಿ, ಕೇಶವ ಪೂಜಾರಿ ಎಂಬ 5 ಐವರನ್ನು ಬಂಧಿಸಿದ್ದಾರೆ. ಇವರಿಂದ ಇಸ್ಪೀಟು ಎಲೆಗಳು, ಪಣಕ್ಕೆ ಇಟ್ಟಿದ್ದ 5,120/- ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಖಚಿತ ವರ್ತಮಾನದ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ ಐ ಪ್ರಸನ್ನ ಅವರ ನೇತೃತ್ವದಲ್ಲಿ ನಡೆದ ಈ ದಾಳಿ ಕಾರ್ಯಾಚರಣೆಯಲ್ಲಿ ಹೆಚ್.ಸಿಗಳಾದ ಜನಾರ್ಧನ, ಜಯರಾಮ, ಸುಂದರ, ರಾಧಾಕೃಷ್ಣ, ಪಿ.ಸಿಗಳಾದ ಮನೋಜ್, ಬಸವರಾಜ್, ಶಿವಕುಮಾರ್ ನಾಯ್ಕ ಪಾಲ್ಗೊಂಡಿದ್ದರು
