ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಜು. 13ರಂದು ಪುನರ್ ಪ್ರತಿಷ್ಠಾಕಲಶಾಭಿಷೇಕ ನೆರವೇರಲಿದೆ. ಜು. 12ರಂದು ಸಂಜೆ ವಾಸ್ತು ಪೂಜೆ, ವಾಸ್ತು ಹೋಮ, ರಕ್ಷೋಘ್ನ ಹೋಮ, ಭದ್ರಕ ಮಂಡಲ ಪೂಜೆ ಹಾಗೂ ದಿಕ್ಪಾಲಕ ಬಲಿ ನಡೆಯಲಿದೆ. ಜು. 13ರಂದು ಬೆಳಿಗ್ಗೆ ಸಂಜೀವಿನಿ ಮಹಾ ಮೃತ್ಯುಂಜಯ ಹೋಮ, ದೈವಗಳಿಗೆ ಕಲಶಾಭಿಷೇಕ, ಶಿಖರ ಕಲಶ ನೆರವೇರಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.
