ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ,ಮರ್ಲಿಮಾರ್ ಪ್ರದೇಶದ ರೈತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ರೈತಸಂಘ,ಹಸಿರುಸೇನೆಯ ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿ ಅವರ ಆಧ್ಯಕ್ಷತೆಯಲ್ಲಿ ಮರ್ಲಿಮಾರ್ ನಲ್ಲಿ ನಡೆಯಿತು. ಸಭೆಯಲ್ಲಿ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.ರಾಜಕಾಲವೆ ಒತ್ತುವರಿಯಿಂದಾಗಿ ಕಳೆದ 5 ವರ್ಷಗಳಿಂದ ಮರ್ಲಿಮಾರ್ ಪ್ತದೇಶದ ರೈತರ ತೋಟ,ಗದ್ದೆಗಳಲ್ಲಿ ನೀರು ನಿಂತು ಸಾಕಷ್ಟು ನಷ್ಟ ಸಂಭವಿಸಿದೆ.
ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು,ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನಕ್ಕೆ ಬಾರದ ಹಿನ್ನಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲು ತೀರ್ಮಾನಿಸಲಾಯಿತು. ಇದೇ ವೇಳೆ ಅಂಚೆಕಾರ್ಡು ಚಳುವಳಿಗೂ ಚಾಲನೆ ನೀಡಲಾಯಿತು.ನೀರ ನಿಂತ ಪರಿಣಾಮದಿಂದ ಅಡಕೆಮರಗಳ ಸೋಗೆ ಕೆಂಪುಬಣ್ಣಕ್ಕೆ ತಿರುಗಿ ಕಾಯಿಲೆ ಭೀತಿ ಇದ್ದು,ಇದರ ಪರಿಹಾರಕ್ಕೆ ವಿಟ್ಲ ಕೃಷಿತಂತ್ರಜ್ಙಾನ ವಿಜ್ಙಾನಿಗಳಿಗೆ ಮನವಿಸಲ್ಲಿಸುವ ತೀರ್ಮಾನ ಕೈಗೊಳ್ಳಲಾಯಿತು. ಬಂಟ್ವಾಳ ತಾಲೂಕು ರೈತಸಂಘದ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್,ಪದಾಧಿಕಾರಿಗಳಾದ ಸುದೇಶ್ ಮಯ್ಯ,ಸೂರಜ್,ಲಕ್ಷ್ಮಣ್ ಮೊದಲಾದವರಿದ್ದರು.
