ಬಂಟ್ವಾಳ : ಅವಧಿ ಮೀರಿದ ದರ್ಕಾಸು ಜಮೀನು ಪರಾಬರೆಗೆ ನಿರಾಕ್ಸೆಪಣಾ ಪತ್ರ ನೀಡುವ ಅಧಿಕಾರ ತಹಸೀಲ್ದಾರರಿಗೆ ನೀಡುವಂತೆ ಬಂಟ್ವಾಳ ತಾಪಂ ಸದಸ್ಯಪ್ರಭಾಕರ ಪ್ರಭು ಅವರು ರಾಜ್ಯದ ಕಂದಾಯ ಸಚಿವರನ್ನು ಪತ್ರದ ಮೂಲಕ ಆಗ್ರಹಿಸಿದ್ದಾರೆ.

IMG_20190622_204841
ಹಲವಾರು ವರ್ಷಗಳಿಂದ  ಸರಕಾರಿ ಜಮೀನಿನಲ್ಲಿ ಕ್ರಷಿ ಮಾಡಿಕೊಂಡು ನಮೂನೆ ’50 ‘:ಹಾಗೂ’ 53.’ ರಲ್ಲಿಆಕ್ರಮ-ಸಕ್ರಮದಡಿ ಅರ್ಜಿ ಸಲ್ಲಿಸಿ ದರ್ಕಾಸು ಮಾಡಿಕೊಂಡು ಸಾಗುವಾಳಿ ಚೀಟಿ ಪಡೆದ ರೈತರು ತಮ್ಮ ದರ್ಕಾಸು ಜಮೀನಿಗೆ ಅವಧಿ ಮೀರಿದ ನಂತರ ಪರಭಾರೆ ಅಥವಾ ದಾನಪತ್ರ ಮಾಡಲು  ನೀರಾಕ್ಷೇಪಣೆ  ಪತ್ರವನ್ನು  ಅಯಾ ತಾಲೂಕು ತಹಸೀಲ್ದಾರ್ ರವರು ನೀಡುತ್ತಿದ್ದರು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕಳೆದ 1-2 ವರ್ಷದಿಂದ ತಹಸೀಲ್ದಾರ್ ನೀಡುವುದನ್ನು ರದ್ದು ಪಡಿಸಿ ಸರ್ಕಾರದ ಹಂತದಲ್ಲಿಯೆ ನೀರಾಕ್ಷೇಪಣಾ ಪಡೆಯುವುದು ಎಂದು ಆದೇಶ ಹೊರಡಿಸಿರುವುದರಿಂದ .ಭೂ ಮಂಜೂರಾತಿ ಪಡಕೊಂಡ ರೈತರು  ಕಷ್ಟದ ಸಮಯದಲ್ಲಿ  ತಮ್ಮ ಜಮೀನು  ಮಾರಾಟ ಅಥವಾ ದಾನಪತ್ರ ಮಾಡುವ ಸಂದರ್ಭಗಳಲ್ಲಿ ಸರಕಾರದಿಂದ ನೀರಾಕ್ಷೇಪಣಾ ಪತ್ರ ಸಿಗದೆ   ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಹಾಗಾಗಿ ಸರಕಾರದಿಂದ ಭೂ ಮಂಜೂರಾತಿ ಪಡಕೊಂಡವರಿಗೆ  ನೀರಾಕ್ಷೆಪಣಾ ಪತ್ರವನ್ನು    ಈ ಹಿಂದಿನಂತೆ  ಅಯಾ ತಾಲೂಕು ತಹಸಿಲ್ದಾರ್ ಗಳಿಗೆ ನೀಡುವಂತೆ ಆದೇಶ ಮಾರ್ಪಾಡು ಮಾಡಿ ಸೂತ್ತೊಲೆ ಹೊರಡಿಸುವಂತೆ ಕಂದಾಯ ಸಚಿವ ದೇಶಪಾಂಡೆ ಅವರನ್ನು ಪತ್ರದಲ್ಲಿ ಒತ್ತಾಯಿಸಿದ್ದಾರೆ.

By suddi9

Leave a Reply

Your email address will not be published. Required fields are marked *