ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳಿಗೆ 1. 20 ಕೋ.ರೂ. ಅನುದಾನ ಬಿಡುಗಡೆಗೊಂಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿದೆ ನಾನು ನಿಮ್ಮ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತನೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಶುಕ್ರವಾರ ಅಮ್ಟಾಡಿ ಗ್ರಾ.ಪಂ.ನಲ್ಲಿ ” ಗ್ರಾಮದ ಕಡೆ ಶಾಸಕರ ನಡೆ” ಗ್ರಾಮ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು ಗ್ರಾಮದ ಜನರ ಬೇಡಿಕೆಯನ್ನುು ಈಡೇರಿಸುವುದು ಮತ್ತು ಸಮಸ್ಯೆ ಗಳ ಪರಿಹರಿಸುವ ನಿಟ್ಟಿನಲ್ಲಿ ಗ್ರಾಮ ಸ್ಪಂದನವನ್ನು ಆಯೋಜಿಸಲಾಗಿದೆ.
ಸರಕಾರದ ಯೋಜನೆ ಪ್ರತಿಯೊಬ್ಬರಿಗೂ ತಲುಪಬೇಕು ಮತ್ತು ಯೋಜನೆಗಳ ಮಾಹಿತಿ ಸಿಗುವಂತಾಗಬೇಕೆಂದು ಅಧಿಕಾರಿಗಳ ಜೊತೆ ಜನರ ಬಳಿ ಬಂದಿದ್ದೇನೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಪಂ.ಅನುದಾನದಲ್ಲಿ ಕುರಿಯಾಳ ಕುಟಿಲ ನಿವಾಸಿ ವಿಕಲಚೇತನ ಭವಾನಿ ಅವರಿಗೆ ವೀಲ್ ಚೇರ್ ನ್ನು ಶಾಸಕರು ವಿತರಿಸಿದರು.
ಸಾರ್ವಜನಿಕ ರಿಂದ ಅಹವಾಲು ಸ್ವೀಕರಿಸಿದ ಅವರು ಕೆಲ ಸಮಸ್ಯೆ ಗಳಿಗೆ ಸ್ಥಳದಲ್ಲಿ ಪರಿಹಾರ ನೀಡಿದರು.ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಶಾಸಕರ ಅನುದಾನದಲ್ಲಿ ನಡೆದ ಕಾಮಗಾರಿಗಳ ಪರಿಶೀಲಿಸಿ ರಸ್ತೆಗಳ ಉದ್ಘಾಟನೆಯನ್ನು ನೆರವೇರಿಸಿದರು.
ಸ್ವಚ್ಚಗೆ ಆದ್ಯತೆ ನೀಡಿ:
ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆ ತಲೆದೋರದಂತೆ ಯೋಜನೆ ರೂಪಿಸಬೇಕಾಗಿದೆ. ಪ್ರತಿ ಗ್ರಾ.ಪಂ.ನವರು ಈ ಕಾರ್ಯಕ್ರಮ ಕ್ಕೆ ಕೈಜೋಡಿಸಬೇಕು ಎಂದರು.ವೇದಿಕೆಯಲ್ಲಿ ತಾ.ಪಂ.ಸದಸ್ಯೆ ಮಲ್ಲಿಕಾ ವಿ.ಶೆಟ್ಟಿ, ಗ್ರಾ.ಪಂ.ಉಪಾಧ್ಯಕ್ಷೆ ಯಶೋಧ, ಸದಸ್ಯ ರಾದ ಶೇಖರ್ ಶೆಟ್ಟಿ, ಬಬಿತಾ ಕೋಟ್ಯಾನ್, ಚೇತನಾ, ಪೂರ್ಣಿಮಾ, ಶ್ರೀಮತಿ ಶೆಟ್ಟಿ, ಐರಿನ್ ಡಿಸೋಜ, ಮೋಹಿನಿ, ವಿಶ್ವನಾಥ, ದೇವದಾಸ್, ಚಂದ್ರಾವತಿ ನಾಯ್ಕ, ಸುನಿಲ್ ಕೆ., ಸುರೇಂದ್ರ, ಸುಧಾಕರ ಶೆಟ್ಟಿ, ರತಿ ಭಂಡಾರಿ, ಕಂದಾಯ ಅಧಿಕಾರಿ ನವೀನ್ ,ಗ್ರಾಮ ಕರಣೀಕ ರಾದ ಶಶಿ ಕುಮಾರ್, ಅಮೃತಾಂಶಿ, ಸಿ.ಡಿ.ಪಿ.ಒ.ಗಾಯತ್ರಿ ಬಾಯಿ , ಪಂ.ಕಾರ್ಯದರ್ಶಿ ಲಕ್ಮೀನಾರಾಯಣ ಕೆ. ಹಾಜರಿದ್ದರು.
ಬಿಜೆಪಿ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ, ರಾಮ್ ದಾಸ ಬಂಟ್ವಾಳ,ಶ್ರೀ ಕಾಂತ ಶೆಟ್ಟಿ ಸಜೀಪ, ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಪುರುಷೋತ್ತಮ ವಾಮದಪದವು, ನಂದರಾಮ್ ರೈ, ಪ್ರದೀಪ್ ಅಜ್ಜಿಬೆಟ್ಟು, ಸುದರ್ಶನ ಬಜ, ಗಣೇಶ್ ರೈ ಮಾಣಿ, ಮತ್ತಿತರರು ಉಪಸ್ಥಿತರಿದ್ದರು.
ಗ್ರಾ.ಪಂ.ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಸ್ವಾಗತಿಸಿದರು.
ಪಿ.ಡಿಒ ಮಹಮ್ಮದ್ ವಂದಿಸಿ , ಕಾರ್ಯಕ್ರಮ ನಿರೂಪಿಸಿದರು


