ಬಂಟ್ವಾಳ : ನಿರ್ಮಾತೃ ಕೆಂಪೇಗೌಡರು ಅವರ ವಂಸಸ್ಥರ ಇತಿಹಾಸ ರೋಚಕ. ನಾಡಪ್ರಭು ಗಳ ಜನಪರ ಕಾಳಜಿ , ತ್ಯಾಗ ಮನೋಭಾವ ಸರ್ವಕಾಲಕ್ಕೂ ಆದರ್ಶವಾಗಿ ಉಳಿವಂತದ್ದು ಎಂದು ರಾ ಷ್ಟ್ರೀಯ ಹಬ್ಬ ಗಳ ಆಚರಣಾ ಸಮಿತಿ ವತಿಯಿಂದ ಬಂಟ್ವಾಳ ಮಿನಿವಿಧಾನ ಸೌಧದ ಸಭಾಂ ಗಣದಲ್ಲಿ ಜರಗಿದ ಕೆಂಪೇಗೌಡ ಜಯಂತಿ ಆಚರಣೆಯನ್ನು ತಹಶೀಲ್ದಾರ್ ರ ಶ್ಮಿ ಎಸ್.ಆರ್ ದೀಪ ಬೆಳಗಿಸಿ ಉದ್ಘಾಟಿಸಿದರು.

KAR_1917
ಇದೇ ಸಂದರ್ಭದಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮೋಹನ್ ಕಾಯರ್ ಮಾರ್, ಕೆಂಪೇಗೌಡ ರ ಸಂದೇಶವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಆಹಾರ ಶಾಖೆಯ ಉಪತಹಶೀಲ್ದಾರ್ ವಾಸು ಶೆಟ್ಟಿ, ಆಹಾರ ಶಾಖೆಯ ಶ್ರೀನಿವಾಸ್, ರಾಷ್ಟ್ರೀಯ ಹಬ್ಬ ಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್, ಒಕ್ಕಲಿಗರ ಸಂಘದ ಕಾರ್ಯದರ್ಶಿ ವಿಶ್ವನಾಥ್, ತಾಲೂಕು ಕಛೇರಿ ಸಿಬ್ಬಂದಿ ವರ್ಗ, ಗ್ರಾಮ ಲೆಕ್ಕಾಧಿಕಾರಿಗಳು , ಗ್ರಾಮ ಸಹಾಯಕರು , ಸಾರ್ವಜನಿಕರು ಉಪಸ್ಥಿತರಿದ್ದರು. ತಾಲೂಕು ಕಛೇರಿ ಸಿಬ್ಬಂದಿ ಜನಾರ್ಧನ್ ಬಂಟ್ವಾಳ್ ಸ್ವಾಗತಿಸಿ ವಂದಿಸಿದರು.

KAR_1927

By suddi9

Leave a Reply

Your email address will not be published. Required fields are marked *