ಬಹು ಕಾಲದ ಬೇಡಿಕೆ ಈಡೇರಿಸಿದ ಶಾಸಕರು
ಮುಲ್ಕಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಪಾಲಡ್ಕ ಗ್ರಾಮದ ಕೇಮಾರು ವಾರ್ಡಿನ ಸೋನಾಡಿ, ಗುಂಡುಕಲ್ಲು, ಹಿತ್ತಿಲು , ಹಕ್ಕೇರಿ, ಅಂಗಡಿಬೆಟ್ಟು ಬೋವಾಡಿ ಈ ಭಾಗದಲ್ಲಿ ಕುಡಿಯುವ ನೀರಿಗೆ ಬಹುಕಾಲದ ಬೇಡಿಕೆಯಾಗಿತ್ತು. ಕೆಲವು ಬಾರಿ ನೀರಿನ ಅಭಾವದಿಂದ ಸುಮಾರು 2 ಕಿ.ಮಿ ದೂರ ಖಾಸಗಿ ಕೊಳವೆಬಾವಿಯಿಂದ ರಿಕ್ಷಾದ ಮೂಲಕ ನೀರು ತರಬೇಕಾಗಿತ್ತು.
ಹಾಗೂ ಮೂಡಬಿದಿರೆಯ ರೋಟರಿಕ್ಲಬ್ ಟೆಂಪಲ್ ಟೌನ್ ಸಂಸ್ಥೆಯ ವತಿಯಿಂದ ಪ್ರತಿವಾರಕೊಮ್ಮೆ ಟ್ಯಾಂಕರ್ ನೀರು ಸರಬರಾಜು ಮಾಡುತ್ತಿದ್ದರು. ಈ ಬಗ್ಗೆ ಸ್ಥಳೀಯ ನಾಗರಿಕರು ಜಿಲ್ಲಾ ಪಂಚಾಯತಿ ಸದಸ್ಯ ಸುಚರೀತ ಶೆಟ್ಟಿ , ಶಾಸಕ ಉಮಾನಾಥ್ ಎ ಕೋಟ್ಯಾನ್ ರವರ ಗಮನಕ್ಕೆ ತಂದಿದ್ದು, ಈದಿಗ ಶಾಸಕರು ಸಾರ್ವಜನಿಕ ಕೊಳವೆಬಾವಿಗೆ ಅನುದಾನ ಒದಗಿಸಿ, ಸಾರ್ವಜನಿಕರಿಗಾಗಿ ಹಕ್ಕೇರಿ ಬಳಿ ಕೊಳವೆಬಾವಿಯನ್ನು ಕೊರೆಯಿಸಲಾಗಿದೆ.ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ಶಾಸಕರ ಕಾರ್ಯಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಅನುದಾನ ಒದಗಿಸಿದ ಶಾಸಕ ಉಮಾನಾಥ್ ಎ ಕೊಟ್ಯಾನ್, ಕಾಮಗಾರಿ ಪ್ರಗತಿಗೆ ಸಹಕರಿಸಿದ ಜಿಲ್ಲಾ ಪಂಚಾಯತಿ ಸದಸ್ಯರಾದ ಸುಚರೀತ ಶೆಟ್ಟಿಯವರಿಗೆ, ಪುತ್ತಿಗೆ ಶಕ್ತಿ ಕೇಂದ್ರದ ಅಧ್ಯಕ್ಷಅಜಯ್ ರೈ ಹಾಗೂ ಮುಲ್ಕಿ ಮೂಡಬಿದಿರೆಯ ಎಸ್ಟಿ ಮೊರ್ಚಾದ ಅಧ್ಯಕ್ಷ ಕಿಶೋರ್ ಕುಮಾರ್ ನಾಯ್ಕ್ ಇವರಿಗೆ ಧನ್ಯವಾದಗಳು.