ಬಂಟ್ವಾಳ: ಬಂಟ್ವಾಳ ತಾ| ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ನಯನಾಡು ಮತ್ತು ಇರ್ವತ್ತೂರು ಶಾಖೆಗಳಲ್ಲಿ ಪಡಿತರ ವ್ಯವಸ್ಥೆಗೆ ಅನುಮತಿ ದೊರಕಿದ್ದು, ಪಡಿತರ ವಿತರಣೆಗೆ ಜೂ.24ರಂದು ಚಾಲನೆ ನೀಡಲಾಯಿತು.
ಸಂಘದ ಅಧ್ಯಕ್ಷ ಕೆ.ಲಕ್ಷ್ಮೀ ನಾರಾಯಣ ಉಡುಪ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ನಯನಾಡು ಮತ್ತು ಇರ್ವತ್ತೂರು ವ್ಯಾಪ್ತಿಯ ಪಡಿತರ ಚೀಟಿದಾರರಿಗೆ ಪಡಿತರ ವಿತರಿಸಿ ಚಾಲನೆ ನೀಡಲಾಯಿತು. ಇರ್ವತ್ತೂರು ಮತ್ತು ನಯನಾಡು ವ್ಯಾಪ್ತಿಯ ರೇಷನ್ ಪಡೆಯುವವರು ಈ ಹಿಂದೆ ಪುಂಜಾಲಕಟ್ಟೆ ಕೇಂದ್ರ ಕಚೇರಿಯಲ್ಲಿ ರೇಷನ್ ಪಡಕೊಳ್ಳಬೇಕಿದ್ದು, ಇದೀಗ ತಮ್ಮ ಊರಿನಲ್ಲಿಯೇ ಪಡೆಯುವ ವ್ಯವಸ್ಥೆಯಾಗಿದೆ. ಇದನ್ನು ಗ್ರಾಮಸ್ಥರು ಸದುಪಯೋಗ ಪಡಿಸಿಕೊಂಡು ಸಹಕಾರಿ ಸಂಘದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

2506pkt1
ಜಿ.ಪಂ. ಸದಸ್ಯ ಎಂ.ತುಂಗಪ್ಪ ಬಂಗೇರ, ತಾ.ಪಂ.ಸದಸ್ಯ ರಮೇಶ್ ಕುಡ್ಮೇರ್, ಉಪಾಧ್ಯಕ್ಷ ಉಮೇಶ ಪೂಜಾರಿ ತಿಮರಡ್ಡ , ನಿರ್ದೇಶಕರಾದ ಸುಂದರ ನಾಯ್ಕ್, ಬೂಬ ಸಪಲ್ಯ, ಸೀತಾರಾಮ ಶೆಟ್ಟಿ ಸೇವಾ, ಚಂದ್ರಶೇಖರ ಹೆಗ್ಡೆ, ನಾರಾಯಣ ಪೂಜಾರಿ, ಸಂತೋಷ್ ಕುಮಾರ್ ಶೆಟ್ಟಿ, ಪ್ರಭಾಕರ ಪಿ. ಎಂ., ಹರ್ಷಿಣಿ ಪುಷ್ಪಾನಂದ, ಸರೋಜಾ ಡಿ. ಶೆಟ್ಟಿ, ಶಿವಯ್ಯ , ದಿನೇಶ್ ಕುಲಾಲ್, ಮುಖ್ಯ ಕಾರ್ಯನಿರ್ವಹಣಾ„ಕಾರಿ ಮಂಜಪ್ಪ ಮೂಲ್ಯ, ಇರ್ವತ್ತೂರು ಗ್ರಾ.ಪಂ. ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್, ಸದಸ್ಯರಾದ ದಯಾನಂದ ಕುಲಾಲ್, ಸು„ೀಂದ್ರ ಶೆಟ್ಟಿ, ಪ್ರಮುಖರಾದ ಜಯರಾಮ ನಾಯ್ಕ್, ಮೆನೇಜರ್‍ಗಳಾದ ರೂಪೇಶ್, ದೀಕ್ಷಿತ್,ಸಿಬಂದಿ ವರ್ಗ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *