ಬಂಟ್ವಾಳ: ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿಯಮಿತವು 2018-19 ನೇ ಸಾಲಿನಲ್ಲಿ 16,18,625-12 ರೂ.ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ರವೀಂದ್ರ ಕಂಬಳಿ ತಿಳಿಸಿದ್ದಾರೆ.  ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಾಭಾಂಶದಲ್ಲಿ  ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಟ್ ನ್ನು ಘೋಷಿಸಿದರು.

SAVE_20190625_121905 ಸಂಘದಲ್ಲಿ ಸುಮಾರು 12 ಕೋ.ರೂ. ದುಡಿಯುವ ಬಂಡವಾಳವಿದ್ದು, ಪ್ರಸ್ತುತ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲು ಸಂಘವು “ಎ” ವರ್ಗವನ್ನು ಪಡೆದಿದ್ದು,ಬ್ಯಾಂಕಿಂಗ್ ವ್ತವಹಾರ ಅಭಿವೃದ್ದಿ ಪಡಿಸಲು ಆಡಳಿತ ಸಮಿತಿ ಶ್ರಮಿಸುತ್ತಿದೆ ಎಂದರು.       ಸಂಘವು  ಸಾಮಾಜಿಕ ಚಟುವಟಿಕೆ ಗಳಿಗೆ ಹೆಚ್ಚು ಒತ್ತು ನೀಡುತ್ತಿದೆ, ಪ್ರತಿ ವರ್ಷ ವಿದ್ಯಾರ್ಥಿಗಳಿಗೆ 1 ಲಕ್ಷ ರೂ.  ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ.

1  ಆರೋಗ್ಯ ಶಿಬಿರ  ಸಹಿತ  ಸಾರ್ವಜನಿಕರಿಗೆ ಉಪಯೋಗವಾಗುವಂತ ಹಲವಾರು ಕಾರ್ಯಕ್ರಮಗಳನ್ನು ಅಯೋಜಿಸಲಾಗುತ್ತಿದೆ ಎಂದು ಅವರು ವಿವರಿಸಿದರು. ಸಂಘದ ಉಪಾಧ್ಯಕ್ಷೆ ಹರ್ಷಿಣಿ, ನಿರ್ದೇಶಕರಾದಸೀತರಾಮ ಶೆಟ್ಟಿ,ಜ್ಞಾನೇಶ್ವರ ಪ್ರಭು, ಪಿ.ಸುಬ್ರಹ್ಮಣ್ಯ ರಾವ್,ರತ್ನಾ,ಶಶಿಕಲಾ ಉಡುಪ,ರಾಮ ನಾಯ್ಕ್,ಪದ್ಮನಾಭ ಕಿದೆಬೆಟ್ಟು,ಸುಂದರಭಂಡಾರಿ,ಪಿ.ವೆಂಕಟೇಶ್ ನಾವುಡ,ಪ್ರಭಾಕರ ಶೆಟ್ಟಿ ವೇದಿಕೆಯಲ್ಲಿದ್ದರು.    ನಿರ್ದೇಶಕ ಬಿ.ಟಿ.ನಾರಾಯಣ ಭಟ್ ವಂದಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಧರ್ಮಪಾಲ ಭಂಡಾರಿ ವರದಿ ವಾಚಿಸಿ,ನಿರೂಪಿಸಿದರು.

By suddi9

Leave a Reply

Your email address will not be published. Required fields are marked *