ಗುರುಪುರ : ಗುರುಪುರ ಅಲೈಗುಡ್ಡೆ ಅಹಲ್ಯಾವನ ನಿವಾಸಿ, ಮಾಣಿಬೆಟ್ಟುಗುತ್ತು ದಿವಂಗತ ಜಯರಾಮ ಶೆಟ್ಟಿಯವರ(ಯಜಮಾನ) ಧರ್ಮಪತ್ನಿ ಅಂಜಾರುಬೀಡು ಮನೋರಮಾ ಜೆ ಶೆಟ್ಟಿ(78) ವೃದ್ಧಾಪ್ಯದ ಕಾರಣ ಸೋಮವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಇವರು ಗುರುಪುರ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ವಿನಯಕುಮಾರ್(ವಿನ್ನು) ಶೆಟ್ಟಿ, ಇನ್ನೋರ್ವ ಪುತ್ರ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಮಿತ್ರನ್ನ ಅಗಲಿದ್ದಾರೆ.

