ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಎರಡು ದಿನಗಳು ನಡೆಯುವ 11ನೇ ವರ್ಷದ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಗಿದ್ದು, ಮೊದಲ ದಿನ 8021 ಉದ್ಯೋಗಕಾಂಕ್ಷಿಗಳು ಆಗಮಿಸಿದರು. 208 ಕಂಪೆನಿಗಳು ಭಾಗವಹಿಸಿದ್ದು, 660 ಮಂದಿ ಅಭ್ಯರ್ಥಿಗಳು ಕಂಪೆನಿಗೆ ಸ್ಪಾಟ್ ಆಯ್ಕೆಯಾಗಿದ್ದಾರೆ. 1357 ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.

Alvas Pragathi 2019 (5)

Alvas Pragathi 2019 (4)

Alvas Pragathi 2019 (3)

Alvas Pragathi 2019 (2)

Alvas Pragathi 2019 (1)

 

 

11837 ಮಂದಿ ಆನ್‍ಲೈನ್ ನೋಂದಣ ಮಾಡಿಕೊಂಡಿದ್ದು, 892 ಸ್ಥಳದಲ್ಲೇ ನೋಂದಣಿ ಮಾಡಿಸಿಕೊಂಡಿದ್ದಾರೆ. ಕೋರ್ ಕಂಪನಿಗಳಾದಂತಹ ತೋಮ್‍ಸಾನ್ ರಾಯಿಟರ್ಸ್, ಇವೈ, ಮೈಂಡ್‍ಟ್ರಿ, ಎಮ್‍ಫಸಿಸ್, ಪೆಟ್ರಕಾನ್, ಟಿಐಎಂಇಸಿ, ಸಿಂಜಿನ್, ಮ್ಯಾವೆಂಟಿಕ್, ಕೋಡ್‍ಕ್ರಾಫ್ಟ್ ಕಂಪನಿಗಳು ತಮ್ಮ ಪ್ರಮುಖ ವಲಯದ ಉದ್ಯೋಗವಕಾಶವನ್ನು ಮೊದಲ ದಿನವೇ ನೀಡಿದ್ದು, ಇನ್ನೂ ಹಲವು ಮುಖ್ಯ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆಯನ್ನು ಎರಡನೆಯ ದಿನವಾದ ಇಂದು ನಡೆಸಲಿದೆ. ಹೊಂಡಾ ಕಂಪನಿಯು ತಮ್ಮ ನರ್ಸಾಪುರದ ಕಾರ್ಖಾನೆಗೆ ಮೊದಲ ದಿನ 239 ಐಟಿಐ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಇವರಿಗೆ ಸಂಬಳ, ಭತ್ಯೆ, ಊಟ ವಸತಿಯ ಸೌಲಭ್ಯಗಳನ್ನು ಕಂಪನಿಯೇ ನೀಡುವುದು ವಿಶೇಷ.
ಥಾಮಸ್ ರಾಯ್‍ಟರ್ಸ್ ಕಂಪನಿಗೆ ವಾರ್ಷಿಕ 5.5 ಲಕ್ಷ ಪ್ಯಾಕೇಜ್‍ಗೆವಾಮಾಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಬಿ.ಇ ಪಧವಿದರೆ ದೀಕ್ಷಿತಾ ಹಾಗೂ ಅದೇ ಕಂಪನಿಗೆ ವಾರ್ಷಿಕ 5.5 ಲಕ್ಷ ಪ್ಯಾಕೇಜ್‍ಗೆ ಉಜಿರೆ ಎಸ್‍ಡಿಎಮ್ ಇಂಜಿನಿಯರಿಂಗ್ ಕಾಲೇಜಿನ ಬಿ.ಇ ಪಧವಿದರೆ ದೀಕ್ಷಾ ಶೆಟ್ಟಿ ಮತ್ತು ಎಸ್.ಎಮ್.ವಿ.ಐ.ಟಿ.ಎಮ್. ಕಾಲೇಜಿನ ನಿಶಾ, ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಲಾರ್ಸನ್ ಡಿ’ಸೋಜ ಆಯ್ಕೆಯಾಗಿದ್ದಾರೆ. ಸುಳ್ಯ ಶ್ರೀ ಪರಿವಾg Àಪಂಚಲಿಂಗೇಶ್ವರ ಕೈಗಾರಿಕ ತರಬೇತಿ ಸಂಸ್ಥೆಯ 9 ವಿದ್ಯಾರ್ಥಿಗಳು ಕೀನೇಸ್ ಟೆಕ್ನಾಲಜಿ(2), ಎಲ್&ಟಿ (2), ಹೊಂಡಾ (3) ಮತ್ತು ಎ.ಬಿ.ಎಫ್ (2) ಹೀಗೆ ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.

ಉದ್ಯೋಗ ಮೇಳಕ್ಕೆ ಚಾಲನೆ:
ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಸಚ್ಚಿದಾನಂದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳಕ್ಕೆ ವಿದ್ಯಾಗಿರಿಯ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಚಾಲನೆ ನೀಡಿ, ಉದ್ಯೋಗದಲ್ಲಿ ಯಾವುದೇ ಕೀಳರಿಮೆ ಬೇಡ, ಪತ್ರಿಯೊಂದು ಕೆಲಸಕ್ಕೂ ಸಮಾಜದಲ್ಲಿ ಆದರದ್ದೆ ಆದ ಸ್ಥಾನಮಾನವಿದೆ. ಆದರಿಂದ ಸಿಗುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಮುನ್ನುಗ್ಗಬೇಕು. ಉದ್ಯೋಗವು ಪುರುಷ ಲಕ್ಷಣ ಎಂದು ನುಡಿಗಟ್ಟಿತ್ತು ಆದರೆ ಇಂದು ಪುರುಷರಿಗೆ ಸಮಾನವಾಗಿ ಮಹಿಳೆಯರು ಕೂಡ ಉದ್ಯೋಗದಲ್ಲಿ ತೊಡಗಿಕೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ. ಇಂದು ಸಮಾಜದಲ್ಲಿ ಮೂರು ರೀತಿ ವರ್ಗವನ್ನು ಕಾಣಬಹುದು ಕೆಲವರು ಅವಕಾಶಕ್ಕಾಗಿ ಕಾಯುವವರಾದರೆ, ಇನ್ನೂ ಕೆಲವರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತಾರೆ, ಆದರೆ ಇನ್ನೂ ಕೆಲವರು ಅವಕಾಶವನ್ನೇ ಸೃಷ್ಠಿಸುತ್ತಾರೆ ಅಂತವರಲ್ಲಿ ಡಾ.ಎಂ.ಮೋಹನ್ ಆಳ್ವ ಕೂಡ ಒಬ್ಬರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ಇತ್ತಿಚೀನ ದಿನಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಬೇರೆ ಬೇರೆ ಕ್ಷೇತ್ರದಲ್ಲಿ ಶಿಕ್ಷಣವನ್ನು ಕೂಡುವಂತಹ ಕಾರ್ಯಗಳನ್ನು ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ಆದರಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜೊತೆಗೆ ಉದ್ಯೋಗದತ್ತ ಗಮನಹರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಸಭಾ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಸಚಿವ ಅಭಯಚಂದ್ರ ಜೈನ್ ಉಪಸ್ಥಿತರಿದ್ದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ್ ಪ್ರಸ್ತಾವಿಕ ನುಡಿಗಳಾನ್ನಾಡಿ ಸ್ವಾಗತಿಸಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಅಜಿತ್ ಹೆಬ್ಬಾರ್ ವಂದಿಸಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *