ಮೂಡುಬಿದಿರೆ: ಡಿ.ಜೆ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಪ್ರಸಕ್ತ ಶೈಕ್ಷಣಿಕ ವರ್ಷದ ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಶಾಲಾ ಅಮೃತಮಹೋತ್ಸವ ಕಟ್ಟಡದಲ್ಲಿ ನಡೆಯಿತು.

ಪತ್ರಕರ್ತ ಪ್ರಸನ್ನ ಹೆಗ್ಡೆ ಸಮಾರಮಭವನ್ನು ಉದ್ಟಾಟಿಸಿ, ಶಿಕ್ಷಣ ತರಗತಿ ಕೊಠಡಿಗೆ ಸೀಮಿತವಾಗದೆ ವಿದ್ಯಾರ್ಥಿಗಳನ್ನು ವಿದ್ಯೆಯ ಜೊತೆಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಪರಿಪೂರ್ಣ ಶಿಕ್ಷಣವನ್ನು ಪಡೆದಂತಾಗುತ್ತದೆ. ನಮ್ಮ ಭಾಷೆ, ಸಂಸ್ಕøತಿ ಉಳಿಯುವಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಕೊಡುಗೆಯು ಇದೆ. ಈ ಶಾಲೆಯ ಹಳೆ ವಿದ್ಯಾರ್ಥಿ ವೀರಪ್ಪ ಮೊಯ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರೆ ಪ್ರಾಥಮಿಕ ಹಂತದಲ್ಲಿ ಅವರಿಗೆ ದೊರೆತ ಉತ್ತಮ ಶಿಕ್ಷಣವು ಕಾರಣ. ಮಕ್ಕಳು ನಾಯಕತ್ವ ಗುಣ, ಸಂಘಟನಾ ಚಾತುರ್ಯ, ಶಿಸ್ತು , ಉತ್ತಮ ಸಂಸ್ಕಾರ ಬೆಳೆಸಿಕೊಂಡಾಗ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಮೂಡಿಬರಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಿದರು ಹೆತ್ತವರನ್ನು ಮತ್ತು ಗುರುಗಳನ್ನು ಮರೆಯಬಾರದು ಎಂದರು.
ಡಿಜೆ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ. ಹೇಮರಾಜ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ನೂತನವಾಗಿ ಆಯ್ಕೆಯಾದ ಶಾಲಾ ಮಂತ್ರಿಮಂಡಲದ ನಾಯಕ ರತನ್ ಹಾಗೂ ಸದಸ್ಯರಿಗೆ ಶಾಲಾ ಮುಖ್ಯ ಶಿಕ್ಷಕ ಶಶಿಕಾಂತ್ ವೈ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿ ಸಂಘದ ವಿರೋಧ ಪಕ್ಷದ ನಾಯಕಿ ಸಹನಾ ಉಪಸ್ಥಿತರಿದ್ದರು.
ಮಂಜುಳಾ ಸ್ವಾಗತಿಸಿದರು. ಶಾಲಾ ಮಂತ್ರಿ ಮಂಡಲದ ಚುನಾವಣಾ ವರದಿಯನ್ನು ಶಿಕ್ಷಕ ನಾಗವರ್ಮ ಜೈನ್ ವಾಚಿಸಿದರು. ಶಿಕ್ಷಕಿ ತ್ರಿಶಲಾ ನಿರೂಪಿಸಿದರು.ಕುಮಾರಿ ಅನ್ನಪೂರ್ಣ ವಂದಿಸಿದರು.

