ಬಂಟ್ವಾಳ : ಮೊಗರನಾಡು ಸಾವಿರ ಸೀಮೆಯ ಪಟ್ಟದರಸಿ ಶ್ರೀ ಉಳ್ಳಾಲ್ತಿ ಅಜ್ವೆರ ದೈವಂಗಳು ಹಾಗೂ ಪರಿವಾರ ದೈವಗಳ ಬಾಲಾಲಯ ಪ್ರತಿಷ್ಟೆಯು ಬಾಳ್ತಿಲ ಬೀಡುವಿನಲ್ಲಿ ಪಳನೀರು ತಂತ್ರಿಗಳಿಂದ ವೈದಿಕ ವಿಧಿವಿಧಾನಗಳೊಂದಿಗೆ ವರದರಾಜ ವಾಸುಕಿವನ ಬಂಟ್ವಾಳ , ಪಟ್ಟಾದಾರ ಪೃತ್ವಿರಾಜ ಬಂಗ ಮುನಿರಾಜ ಜೈನ್ , ಕಾರ್ಯಾಧ್ಯಕ್ಷ ಬ್ರಿಜೇಶ್ ಜೈನ್ , ಬಾಳ್ತಿಲಬೀಡು ಕುಟುಂಬಸ್ಥರು ನೇತೃತ್ವದಲ್ಲಿ ಹಾಗೂ ಓಡಾಲಗುತ್ತು ಮೋಹನ್ ರಾಜ್ ಚೌಟ , ಪುಂಜಾಲ್ ಮಾರುಗುತ್ತು , ಏಳ್ತಿಮಾರು ಚಾವಡಿ, ಸೀಮೆಯ ಹತ್ತು ಸಮಸ್ತರ ಸಮ್ಮುಖದಲ್ಲಿ ನೆರವೇರಿತು. ಗಣ್ಯರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಮಾಜಿ.ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್, ಸುಭಾಸ್ ರೈ ದಾಸಕೋಡಿ, ಈಶ್ವರ ಪೂಜಾರಿ ಕುರ್ಮಾನು ಉಪಸ್ಥಿತರಿದ್ದರು.

