ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಶಾರದಾನಗರ ಶ್ರೀ ಶಾರದಾಂಬಿಕ ಭಜನಾ ಮಂದಿರದಲ್ಲಿ ಭಜನಾ ತರಬೇತಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಧಾರ್ಮಿಕ ಮುಂದಾಳು ಎಂ.ಸುಬ್ರಹ್ಮಣ್ಯ ಭಟ್ ಅವರು ಕೇಂದ್ರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸ್ಥಳೀಯ ಮಕ್ಕಳಿಗೆ ಭಜನೆಯನ್ನು ಕಲಿಸಿಕೊಡುವ ನಿಟ್ಟಿನಲ್ಲಿ ಕೇಂದ್ರವನ್ನು ಆರಂಭಿಸಿರುವುದು ಸ್ತುತ್ಯಾರ್ಹವಾಗಿದೆ ಈ ಪುಣ್ಯದ ಕೆಲಸದಿಂದ ಮಕ್ಕಳು ಉತ್ತಮ ಸಂಗೀತಗಾರನಾಗಿ ಮೂಡಿ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

