ಬಂಟ್ವಾಳ: ತಾಲೂಕಿನ ಐತಿಹಾಸಿಕ ಹಿನ್ನಲೆಯುಳ್ಳ   ಕಡೇಶಿವಾಲಯ ಚಿಂತಾಮಣಿ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಮತ್ತು ಅಜಿಲಮೊಗರು ದರ್ಗಾ ಈ ಎರಡು ಪ್ರಮುಖ ಧಾರ್ಮಿಕ ಕ್ಷೇತ್ರವನ್ನು  ಸಂಪರ್ಕಿಸುವ  ಸೇತುವೆ ಕಾಮಗಾರಿಯನ್ನು ಸ್ಥಳೀಯರ ಬೇಡಿಕೆಯಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಕಾಮಗಾರಿಗೆ ಮಂಜೂರಾತಿ ಕೊಡಿಸಿ, ಟೆಂಡರ್ ಪ್ರಕ್ರಿಯೆಯವರೆಗೆ ಫಾಲೋಅಪ್ ತನ್ನ  ಶಾಸಕತ್ವದ ಅವಧಿಯಲ್ಲಿ ನಡೆದಿದ್ದು, ಇದಕ್ಕೆ “ಸೌಹಾರ್ದ ಸೇತುವೆ” ಎಂಬ ಹೆಸರನ್ನು ಕೊಟ್ಟವನೇ ತಾನು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

KAR_1628

ಕಡೇಶಿವಾಲಯ ಭಾಗದಲ್ಲಿ ಸೋಮವಾರ ಸೇತುವೆ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯರು ಈ ಕುರಿತಾಗಿ ಹಲವು ಬಾರಿ ಬೇಡಿಕೆ ಇಟ್ಟಿದ್ದು, ಕಡೇಶಿವಾಲಯ ಮತ್ತು ಮಣಿನಾಲ್ಕೂರು ಸಂಪರ್ಕ ಕೊಂಡಿಯಾಗಿರುವ ಈ ಸೇತುವೆ ನಿರ್ಮಾಣ ಕುರಿತು ಸರಕಾರಕ್ಕೆ ಪ್ರಸ್ತಾಪಿಸಿದ್ದೆ. ಮಂಜೂರುಗೊಳ್ಳುವುದು ಖಚಿತ ಎಂದಾದಾಗ 2016ರಲ್ಲಿ ತಾನು ಈ ಕುರಿತು ಘೋಷಣೆ ಮಾಡಿ, ಎರಡೂ ಧರ್ಮಗಳ ಸಂಪರ್ಕ ಸೇತುವೆಯಾದ ಕಾರಣ, ಸೌಹಾರ್ದ ಸೇತುವೆ ಎಂಬ ಹೆಸರನ್ನಿಟ್ಟಿದ್ದೆ   ಎಂದರು. 10btl-Kadeshwalya Bridge work Progress

 ಪಿಡಬ್ಲ್ಯುಡಿ ಯಿಂದ ಗಡಿಯಾರದಿಂದ ಮಾವಿನಕಟ್ಟೆವರೆಗೆ ಸೇತುವೆಯನ್ನು ಸೇರಿಸಿ 31 ಕೋಟಿ ರೂಗಳ ಅಂದಾಜುಪಟ್ಟಿ ಸಲ್ಲಿಸಲಾಗಿತ್ತು. ಬಳಿಕ ಇದನ್ನು ಕೆಆರ್ ಡಿಸಿಎಲ್ ಗೆ ನೀಡಲಾಯಿತು. 2017ನೇ ಇಸವಿಯಲ್ಲಿ ಸೇತುವೆ ಕಾಮಗಾರಿಗೆ ಮಂಜೂರಾತಿ ದೊರಕಿತು. 19.84 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಲಾಗುವ ಸೇತುವೆ ಕಾಮಗಾರಿಗೆ 2018ರಲ್ಲಿ ಟೆಂಡರ್ ಪ್ರಕ್ರಿಯೆಗಳು ಮುಗಿದಿದ್ದವು, ಇದೀಗ ಕಾಮಗಾರಿ ನಡೆಯುತ್ತಿದ್ದು, ಒಟ್ಟು 30 ತಿಂಗಳಲ್ಲಿ ಕೆಲಸ ಅಂತಿಮಗೊಳ್ಳಬೇಕಿದೆ ಎಂದರು.

KAR_1629

ತನ್ನ ಶಾಸಕತ್ವದ ಅವಧಿಯಲ್ಲಿ ಮಂಜೂರುಗೊಳಿಸಲಾದ ಪಶ್ಚಿಮವಾಹಿನಿ, ಬಹುಗ್ರಾಮ ಕುಡಿಯುವ ನೀರು ಯೋಜನೆ,ಕ್ರೀಡಾಂಗಣ ಮೊದಲಾದ ಕಾಮಗಾರಿಗಳು ಸಕಾಲಕ್ಕೆ ಜನರಿಗೆ ಉಪಯೋಗಕ್ಕೆ ದೊರಕಬೇಕು. ಈ ಕುರಿತು ತಾನು ಸದಾ ಗಮನಹರಿಸುತ್ತಿರುತ್ತೇನೆ ಎಂದ ರೈ, ಕಡೇಶಿವಾಲಯ ಗಡಿಯಾರ ರಸ್ತೆ ಅಭಿವೃದ್ಧಿ ಕುರಿತೂ ಚಿಂತನೆ ನಡೆದಿತ್ತು . ಈ ಸೇತುವೆಯು ಅನುಷ್ಠಾನಕ್ಕೆ ಬಂದು ಕಾಮಗಾರಿಯ ಆರಂಭವಾಗಿರುವುದು ಮನಸ್ಸಿಗೆ ಸಮಾಧಾನ ತಂದಿದೆ  ಎಂದರು.

KAR_1611

312 ಮೀಟರ್ ಉದ್ದ:

ಈ ಸೇತುವೆ 312 ಮೀಟರ್ ಉದ್ದ, 10.5 ಮೀಟರ್ ಎತ್ತರವಿರಲಿದೆ. 19.84 ಕೋಟಿ ರೂ ವೆಚ್ಚವಾಗಲಿದ್ದು, 13 ಪಿಲ್ಲರ್, 14 ಫೌಂಡೇಶನ್ ಗಳು ಇರುತ್ತವೆ. ಇಲ್ಲಿಂದ ರಸ್ತೆ 7.5 ಮೀಟರ್ ಅಗಲ ಇರುವುದು      ಎಂದು ಕಾಮಗಾರಿ ಕುರಿತು ಸುದ್ದಿಗೋಷ್ಠಿಯಲ್ಲಿದ್ದ ಕೆಆರ್ ಡಿಸಿಎಲ್ ಅಸಿಸ್ಟೆಂಟ್ ಇಂಜಿನಿಯರ್ ಮಂಜೇಶ್  ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾವೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಮಣಿನಾಲ್ಕೂರು ಗ್ರಾಪಂ ಅಧ್ಯಕ್ಷೆ ಗೀತಾ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪ್ರಮುಖರಾದ ಮಾಯಿಲಪ್ಪ ಸಾಲಿಯಾನ್, ಸಂಪತ್ ಕುಮಾರ್ ಶೆಟ್ಟಿ, ಈಶ್ವರ ಪೂಜಾರಿ, ಗುತ್ತಿಗೆದಾರ ರಾಘವನ್ ,   ಗ್ರಾ. ಪಂ.ಸದಸ್ಯ  ಆದಂಕುಂಞ    ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *