ಉಡುಪಿ: ಬಿಸಿಲ ಬೇಗೆಯಲ್ಲಿ ಬೇಯುತ್ತಿರುವ ಕರಾವಳಿಗರು ಮುಂಗಾರಿನ ನಿರೀಕ್ಷೆಯಲ್ಲಿದ್ದರೂ, ಸಕಾಲದಲ್ಲಿ ಮಳೆಯಾಗದೇ ನಗರ ಮಾತ್ರವಲ್ಲ ಗ್ರಾಮೀಣ ಪ್ರದೇಶದಲ್ಲೂ ಕುಡಿಯುವ ನೀರಿಗೂ ಕಷ್ಟಪಡುವ ಪರಿಸ್ಥಿತಿ. ಮಳೆಗಾಗಿ ವಿಶೇಷ ಪ್ರಾರ್ಥನೆಗಳೂ ಆರಾಧನೆಗಳು ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದು, ಉಡುಪಿಯಲ್ಲಿ ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿದ ಘಟನೆ ನಡೆದಿದೆ.

manduka kalyanostava
ಹಿಂದೂ ಸಂಪ್ರದಾಯದಂತೆ ವರುಣ ಎಂದು ಹೆಸರಿಸಲಾದ ಗಂಡು ಕಪ್ಪೆ ಹಾಗೂ ವರ್ಷ ಹೆಸರಿನ ಹೆಣ್ಣು ಕಪ್ಪೆಗೆ
ಉಡುಪಿಯ ಕಿದಿಯೂರ್ ಹೋಟೆಲಿನ ವಾಹನ ನಿಲುಗಡೆ ಪ್ರಾಂಗಣದಲ್ಲಿ ವಿವಾಹ ನೆರವೇರಿಸಲಾಯಿತು.
ಕೊಳಲಗಿರಿಯ ಕೀಳಿಂಜೆಯಲ್ಲಿ ಪತ್ತೆಯಾದ ಹೆಣ್ಣು ಕಪ್ಪೆ ಮತ್ತು ಉಡುಪಿ ಕಲ್ಸಂಕದಲ್ಲಿ ಪತ್ತೆಯಾದ ‘ವರುಣ’ ಹೆಸರಿನ ಗಂಡು ಕಪ್ಪೆ ಮಂಡೂಕ ಕಲ್ಯಾಣೋತ್ಸವದ ನೆಪದಲ್ಲಿ ಮದುವೆಯಾಗಿವೆ.
ತ್ರಿಚಕ್ರ ಸೈಕಲ್‍ನಲ್ಲಿ ಪಂಜರದಲ್ಲಿ ಇರಿಸಲಾದ ಜೋಡಿ ಕಪ್ಪೆಗಳ ಮದುವೆ ದಿಬ್ಬಣ, ನಾಸಿಕ್ ಬ್ಯಾಂಡ್ ಗಾಯನ ಸಾಥ್ ನೀಡಿದರು. ಸಂಪ್ರದಾಯಿಕ ಉಡುಗೆಯಲ್ಲಿದ್ದ ಮಹಿಳೆಯರು ಕಲ್ಯಾಣೋತ್ಸವದಲ್ಲಿ ಭಾಗಿಯಾಗಿದರು. ಹೆಣ್ಣು ಕಪ್ಪೆಗೆ ಮಲ್ಲಿಗೆ ಹೂವು ಮುಡಿಸಿ, ತಿಲಕ ಹಚ್ಚಿ, ಕಾಲುಂಗುರ ತೊಡಿಸಿ, ಮಾಂಗಲ್ಯ ಕಟ್ಟುವ ಮುಖೇನ ಕಪ್ಪೆಗಳ ಮದುವೆ ಮಾಡಿಸಲಾಯಿತು.

By suddi9

Leave a Reply

Your email address will not be published. Required fields are marked *