ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿ ವಿಶ್ವಪರಿಸರ ದಿನಾಚರಣೆ ನಡೆಯಿತು. ಶಾಲಾ ಸಂಚಾಲಕಿ ಪ್ಲೋರೆನ್ಸ್ ಮೆಂಡಿಸ್ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮ್ಯಾನೇಜಿಂಗ್ ಟ್ರಸ್ಟಿ ವಾಲ್ಡರ್ ಸ್ಟೀಫನ್ ಮೆಂಡಿಸ್ ಅಧ್ಯಕ್ಷತೆ ವಹಿಸಿ “ಸ್ವಚ್ಚ ಪರಿಸರವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಆದ್ಯ ಕರ್ತವ್ಯವೆಂದರು”.
ಅನನ್ಯ ಹಾಗೂ ವಿಶ್ವ ಪರಿಸರ ದಿನಾಚರಣೆ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು. ಮುಖ್ಯ ಶಿಕ್ಷಕ ಮಹೇಶ್ ಶೆಟ್ಟಿ, ಮುಖ್ಯ ಶಿಕ್ಷಕಿ ಸ್ವರ್ಣಲತಾ, ಸಂಯೋಜಕಿ ಆನೆಟ್ ಡಿ.ಸೋಜಾ, ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಭಾಷಣ, ಪರಿಸರಗೀತೆ, ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆ ನಡೆಯಿತು. ಶಾಲಾ ಆವರಣದಲ್ಲಿ ಇಲಾಖೆ ನೀಡಿದ ಗಿಡಗಳನ್ನು ನೆಡಲಾಯಿತು. ರುಮಾನ ಸ್ವಾಗತಿಸಿ ಜಾನೆಟ್ ವಂದಿಸಿದರು. ನಿಶಾ ಕಾರ್ಯಕ್ರಮ ನಿರೂಪಿಸಿದರು.
