ಕೈಕಂಬ:ಪ್ರಪಂಚದ ಅತೀ ದೊಡ್ಡ ಕಸ ಮನುಷ್ಯ ಕಸದ ವಿಲೇವಾರಿಯನ್ನು ವಿವೇಚನೆಯಿಲ್ಲದೆ ಮಾಡಿ ಇಡೀ ಪ್ರಕೃತಿ ಮಾತೆಯ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾನೆ ಎಂದು ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ಇಂಟರ್ಯಾಕ್ಟ್ ಕ್ಲಬ್ ಮತ್ತು ಇಕೋ ಕ್ಲಬ್ ವತಿಯಿಂದ ನಡೆದ ಪರಿಸರ ದಿನಾಚರಣೆಯಲ್ಲಿ ಶ್ರೀ ರಾಜಮಣಿ ರಾಮಕುಂಜ ನಿವೃತ್ತ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.

7vp parisara dinacharane
ಪಶ್ಚಿಮ ಘಟ್ಟದಲ್ಲೂ ಅಣಬೆಯಂತೆ ತಲೆಯೆತ್ತುತ್ತಿರುವ ಹೋಂ ಸ್ಟೇ, ಗಣಿಗಾರಿಕೆಗಳಿಂದ ಅನೇಕ ಜೀವ ಪ್ರಭೇಧಗಳು ಗಿಡ ಮೂಲಿಕೆಗಳು ನಾಶವಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಶಿಕ್ಷಕಿ ಮಂಜುಳಾ ಕುಮಾರಿ ಅತಿಥಿ ಪರಿಚಯ ಮಾಡಿದರು. ಜಾನೆಟ್ ಲೋಬೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯಾರಾದ ಉಮಾ, ರಂಜಿತಾ, ಪೂರ್ಣಿಮಾ, ಡಯಾನ, ಹೇಮಲತಾ, ರಶೀದಾ, ಮಂಜುಳಾ ಉಪಸ್ಥಿತರಿದ್ದರು.
ಕುಮಾರಿ ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿ,ಲಾವಣ್ಯ ಧನ್ಯವಾದವಿತ್ತರು

By suddi9

Leave a Reply

Your email address will not be published. Required fields are marked *