ಉಡುಪಿ:- ಪರಿಸರ ಮತ್ತುಆರೋಗ್ಯ ಪೂರಕವಾಗಿದೆ ಹೀಗಾಗಿ ಪರಿಸರ ಉಳಿದರೆ ಮಾತ್ರ ಮಾನವ ಸಂಕುಲ ಉಳಿಯಬಹುದು ನಾವೆಲ್ಲರೂ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆಎಂದು ಲಂಡನಿನ ಸಿ.ಎಸ್.ಐ ಬೋರ್ಡ ಪ್ರಮುಖರಾದ ಸ್ಟಾನ್ಲಿಕರ್ಕಡ ಹೇಳಿದರು.
ಅವರುಜೂನ್ 5 ರಂದು ಲೋಂಬಾರ್ಡ್ ಮೆಮೋರಿಯಲ್(ಮಿಷನ್) ಆಸ್ಪತ್ರೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಕಾರ್ಯಕ್ರಮದಲ್ಲಿ ಮಾತನಾಡಿದರು.

cec9b731-3785-403d-9a8e-b8d24094fdcf
ವಿಶ್ವ ಸಂಸ್ಥೆಯ ಈ ವರ್ಷದದ್ಯೇಯ ವಾಯು ಮಾಲಿನ್ಯತಡೆವುದಾಗಿದೆ ಈ ನಿಟ್ಟಿನಲ್ಲಿ ಈ ದಿನ ಮಾತ್ರವಲ್ಲದೆ ವರ್ಷ ಪೂರ್ತಿ ಪರಿಸರ ಬೆಳೆಸುವ ಕೆಲಸ ನಡೆಯಬೇಕುಎಂದರು.
ಅದ್ಯಕ್ಷತೆ ವಹಿಸಿದ ಆಸ್ಪತ್ರೆಯ ವೈದ್ಯಕೀಯ ನೀರ್ದೆಶಕಡಾ|| ಸುಶೀಲ್ ಜತ್ತನ್ನ ಪರಿಸರದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನರ್ಸಿಂಗ್ ವಿದ್ಯಾರ್ಥಿ ವಿದ್ಯಾರ್ಥಿಗಳಿಂದ ಪರಿಸರದ ಬೀದಿ ನಾಟಕ ನಡೆಯಿತು.ಈ ಸಂದರ್ಭದಲ್ಲಿಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಡಾ|| ಗಣೇಶಕಾಮತ್,ಡಾ|| ನಾರಾಯಣ ಪೆರಳಾಯ,ಡಾ||ಮನೋಹರ್ ಬೋಳೂರು,ಮಲಬಾರ್‍ಗೋಲ್ಡ್ ನ ರಾಘವೇಂದ್ರ ನಾಯಕ್,ವೈದ್ಯಕೀಯ ಪ್ರತಿನಿಧಿ ಸಂಘದ ಮಧುಸೂಧನ್ ಹೇರೂರು,ರಾಘವೇಂದ್ರ ಪ್ರಭು ಕರ್ವಾಲು,ಜೇಸಿಐ ನ ಜಗದೀಶ್ ಶೆಟ್ಟಿ,ನರ್ಸಿಂಗ್ ಕಾಲೇಜಿನ ವೀಣಾ ಮೆನೆಜಸ್,ಹೆಲೆನ್ ಮಥಾಯಿಸ್,ಆಸ್ಪತ್ರೆಯ ಸಿಬ್ಬಂದಿಗಳು ಬಾಗವಿಸಿದ್ದರು.

By suddi9

Leave a Reply

Your email address will not be published. Required fields are marked *