ಮೂಡುಬಿದಿರೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ, ವೈದ್ಯಕೀಯ ಕೋರ್ಸುಗಳಿಗೆ ನಡೆದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ತಯಾರಿ ನಡೆಸಿದ 55 ವಿದ್ಯಾರ್ಥಿಗಳಲ್ಲಿ ಇಬ್ಬರು 600ಕ್ಕಿಂತ ಹೆಚ್ಚು ಹಾಗೂ 12 ವಿದ್ಯಾರ್ಥಿಗಳು 500 ಕ್ಕಿಂತ ಹೆಚ್ಚು ಅಂಕಗಳಿಸಿದ್ದಾರೆ.

ಸಂತೋಷ ರೆಡ್ಡಿ -625, ಶ್ಲೋಕಶ್ರೀ-602, ಸುದೀಪ್ ಜಾವಳ್ಳಿ -587, ರೆನೋ-566, ಸಿರಿ-534, ಗಣೇಶ ಗೌಡ-528, ಸಾಗರ್ ಜಿ-535 ಸಾಧನೆ ಮಾಡಿದ ವಿದ್ಯಾರ್ಥಿಗಳು. ಬೇರೆ ಬೇರೆ ವಿದ್ಯಾಸಂಸ್ಥೆಗಳಲ್ಲಿ ದ್ವಿತಿಯ ಪಿಯುಸಿ ಮುಗಿಸಿ ಬಂದಂತಹ 33 ವಿದ್ಯಾರ್ಥಿಗಳಿದ್ದ ನೀಟ್ ಪುನರಾವರ್ತಿತ ವಿದ್ಯಾರ್ಥಿಗಳ ಬ್ಯಾಚ್‍ನಲ್ಲಿ- 6 ವಿದ್ಯಾರ್ಥಿಗಳು 500 ಕ್ಕಿಂತಲೂ ಹೆಚ್ಚಿನ ಅಂಕವನ್ನು ಗಳಿಸಿದ್ದಾರೆ. 25 ವಿದ್ಯಾರ್ಥಿಗಳು 400ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಯುವರಾಜ್‍ಜೈನ್, ಕಾಲೇಜಿನ ಪ್ರಾಂಶುಪಾಲ ಪ್ರದೀಪ್‍ಕುಮಾರ್ ಶೆಟ್ಟಿ, ನೀಟ್ ಸಂಯೋಜಕ ಡಾ. ಪ್ರಶಾಂತ್ ಹೆಗಡೆ, ರಸಾಯನ ಶಾಸ್ತ್ರ ಪ್ರಾಧ್ಯಾಪಕ ಪೆÇ್ರ.ದಯಾನಂದ್, ಭೌತ ಶಾಸ್ತ್ರ ಪ್ರಾಧ್ಯಾಪಕ ರಾಮಮೂರ್ತಿ ಅಭಿನಂದಿಸಿದ್ದಾರೆ.
