ಮೂಡುಬಿದಿರೆ: ಮರ ಮತ್ತು ಸಾರಿಗೆ ಉದ್ಯಮಿ, ಸಮಾಜ ಸೇವಕ ಮೂಡುಬಿದಿರೆ ಸ್ವರಾಜ್ಯಮೈದಾನ್ ಬಳಿಯ ಗುರುಪ್ರಸಾದ್ ನಿಲಯ ನಿವಾಸಿ ನಾಗರಕಟ್ಟೆ ಮಜಲುಮನೆ ಸೋಮನಾಥ ಅಂಚನ್ (62) ಜೂ. 3ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅವರು ಅಗಲಿದ್ದಾರೆ.

ಸಮಾಜ ಮಂದಿರ ಸಭಾ ವಾಣಿಜ್ಯ ಸಂಕೀರ್ಣದಲ್ಲಿ ನವಮಿ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಉದ್ಯಮವನ್ನು ನಡೆಸುತ್ತಿದ್ದ ಅವರು ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ, ನಾಗರಕಟ್ಟೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಜನಾನುರಾಗಿ ವ್ಯಕ್ತಿತ್ವದವರಾಗಿದ್ದರು.
