ಜೇಸಿಐ ಜೋಡುಮಾರ್ಗ ನೇತ್ರಾವತಿಗೆ ಇತ್ತೀಚೆಗೆ ಪುತ್ತೂರು ಜೇಸಿಐ ಆತಿಥ್ಯದಲ್ಲಿ ನಡೆದ ವಲಯ 15ರ ಮಧ್ಯಂತರ ಸಮ್ಮೇಳನದಲ್ಲಿ ಘಟಕ ತನ್ನ ಅತ್ಯುತ್ತಮ ಸಾಧನೆಗಾಗಿ ಅತ್ಯುತ್ತಮ ಘಟಕ ಪ್ರಶಸ್ತಿ ದ್ವಿತೀಯ, ಸಿಲ್ವರ್ ಘಟಕ ಪ್ರಶಸ್ತಿ,
ಭಾವೈಕ್ಯತಾ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಭಾವೈಕ್ಯತಾ ಪ್ರಮಾಣ ವಚನ ಬೋಧಿಸಿರುವುದರಲ್ಲಿ ದ್ವಿತೀಯ, ಪವರ್ ಟಾಕ್ ಸಭೆ ನಡೆಸಿದಕ್ಕಾಗಿ ಮನ್ನಣೆ ಹೀಗೆ ಹಲವಾರು ಪ್ರಶಸ್ತಿ ಮನ್ನಣೆಗಳನ್ನು ಈ ಸಮ್ಮೇಳನದಲ್ಲಿ ಪಡೆದುಕೊಂಡಿರುತ್ತದೆ. ಸಮಾರಂಭದಲ್ಲಿ ಭಾಗವಹಿಸಿದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವಲಯಾಧ್ಯಕ್ಷರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
