ಬಂಟ್ವಾಳ:  ಕ್ಯಾಂಪ್ಕೊ ಸಂಸ್ಥೆಯ  ನೌಕರರು  ‘ಕ್ಯಾಂಪ್ಕೊ ಇನ್ ಸೇವಾ’ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರರವರು ಹೇಳಿದ್ದಾರೆ‌.   ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಪುದ್ದೋಟು ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾದ ಪುಸ್ತಕ, ಬ್ಯಾಗ್ ಹಾಗೂ ಕೊಡೆ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಕಟ್ಟಕಡೆಯ ವ್ಯಕ್ತಿಯೂ ಶಿಕ್ಷಣದಿಂದ ವಂಚಿತರಾಗಬಾರದು,ಸರ್ಕಾರಿ ಶಾಲೆಯ ಉಳಿವಿಗಾಗಿ ಇಡೀ ವರ್ಷದ ಪುಸ್ತಕ ಹಾಗೂ ಬ್ಯಾಗ್ ವಿತರಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾಗಿದೆ    ಎಂದರು.
IMG-20190604-WA0022
 ಕ್ಯಾಂಪ್ಕೊ ಉಪಾಧ್ಯಕ್ಷ ಶಂ.ನಾ.ಖಂಡಿಗೆ, ಕ್ಯಾಂಪ್ಕೊ ಜನರಲ್ ಮ್ಯಾನೇಜರ್ ರೇಷ್ಮಾ ಮಲ್ಯ, ಹಿರಿಯ ಅಧಿಕಾರಿಗಳಾದ ಸುರೇಶ್ ವಿ, ಅರುಣಾ ಆರ್.ಶೆಟ್ಟಿ , ಕ್ಯಾಂಪ್ಕೊ ಇನ್ ಸೇವಾ ಸಂಯೋಜಕ ಶ್ರೀಗಣೇಶ್ , ಶ್ರೀಕೃಷ್ಣ ಮಿತ್ರ ಮಂಡಳಿ ಸದಸ್ಯ ಬಾಲಕೃಷ್ಣ ಶೆಟ್ಟಿ ಖಂಡಿಗ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ  ಅಶೋಕ್ ನಾಯಕ್, ಸಮೂಹ ಸಂಪನ್ಮೂಲ ವ್ಯಕ್ತಿ ಇಂದಿರಾ ಐ , ಶಾಲೆಯ ಸ್ಥಳದಾನಿ ಶಂಕರನಾರಾಯಣ ಭಟ್ ನೆಕ್ಕರೆಮೂಲೆ, ಊರಿನ ಪ್ರಮುಖರಾದ  ರಮೇಶ್ ರಾವ್ ಪತ್ತುಮುಡಿ, ಗೋವಿಂದ ನಾಯಕ್ ಆಳಾಬೆ, ಅಂದು ಬ್ಯಾರಿ ನೂಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಂಚಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೋಹನದಾಸ ಶೆಟ್ಟಿ ಪುದ್ದೋಟುರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಕೃಷ್ಣ ಮಿತ್ರ ಮಂಡಳಿ ವತಿಯಿಂದ ವಿದ್ಯಾರ್ಥಿಗಳಿಗೆ ಕೊಡೆ ವಿತರಿಸಲಾಯಿತು.
ಶ್ರೀಕೃಷ್ಣ ಮಿತ್ರ ಮಂಡಳಿಯ ಅಧ್ಯಕ್ಷ ಹಾಗೂ ಕ್ಯಾಂಪ್ಕೊ ನೌಕರ ದಿನೇಶ್ ಕುಮಾರ್ ಪ್ರಸ್ತಾವಿಸಿ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶಿವರಾಮ ಶೆಟ್ಟಿ ವಂದಿಸಿದರು.ಶಿಕ್ಷಕಿ ದಿವ್ಯಾ ಕೆ.ವಿ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *