ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಅವರು  ಸೋಮವಾರ ಸಂಜೆಯ ವೇಳೆ ಹಾಗೆ ಸುಮ್ಮನೆ ಬಿ.ಸಿ.ರೋಡಿನ ಇಂದಿರಾ ಕ್ಯಾಂಟೀನ್ ಗೆ  ಭೇಟಿ ನೀಡಿ ಸಂಜೆಯ ಉಪಾಹಾರ ಕೇಸರಿ ಬಾತ್ನ ರುಚಿ ಸವಿದರು.IMG-20190603-WA0337

ಈ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ ಗೆ ಉಪಹಾರ ಸೇವನೆಗೆ ಅಗಮಿಸಿದ್ದ ಗ್ರಾಹಕರು ತಿಂಡಿಯ ಜೊತೆಗೆ ಚಹಾ ಕೂಡಾ ಸಿಗುವಂತೆ ಮಾಡಬೇಕು ಎಂದು ರೈ ಅವರಲ್ಲಿ ಕೇಳಿಕೊಂಡರು.
ಇವರ ಮನವಿಗೆ ಸ್ಪಂದಿಸಿದ ರಮಾನಾಥ ರೈ ಅವರು ಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚಿಸುವ ಬಗ್ಗೆ ಭರವಸೆ  ನೀಡಿದರು.  ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಪ್ರಮುಖರಾದ ಸದಾನಂದ ಶೆಟ್ಟಿ ಪಂಜಿಕಲ್ಲು, ಚಿತ್ತರಂಜನ್ ಶೆಟ್ಟಿ, ಸುರೇಶ್ ಜೊಹರಾ, ಮೋಹನ್ ಶೆಟ್ಟಿ, ಸಂತೋಷ್ ಪೂಜಾರಿ, ನಾಗೇಶ್, ಮತ್ತಿತರರು  ಮಾಜಿ  ಸಚಿವರಿಗೆ ಸಾಥ್ ನೀಡಿದರು.

By suddi9

Leave a Reply

Your email address will not be published. Required fields are marked *