ಮೂಡುಬಿದಿರೆ: ನರೇಂದ್ರ ಮೋದಿ ಅವರು 2ನೇ ಬಾರಿ ಪ್ರಧಾನಿಯಾಗುವಂತೆ ಮೂಡುಬಿದಿರೆಯ ಭಕ್ತರು ಚುನಾವಣೆ ಸಂದರ್ಭದಲ್ಲಿ ಮೋದಿ ಅವರ ಹೆಸರಿನಲ್ಲಿ ಮೂಡುಬಿದಿರೆ ಶ್ರೀ ಹನುಮಂತ ದೇವಸ್ಥಾನದಲಿ ರಂಗಪೂಜೆಯ ಹರಕೆ ಸಂಕಲ್ಪದಂತೆ ಶುಕ್ರವಾರ ರಾತ್ರಿ ರಂಗಪೂಜೆ ನೆರವೇರಿತು.

ಹರಕೆದಾರ, ದೇವಸ್ಥಾನದ ಟ್ರಸ್ಟಿ ಎಂ.ಶಾಂತರಾಮ ಕುಡ್ವ, ಶ್ರೀ ವೆಂಕಟರಮಣ ಹಾಗೂ ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ, ಟ್ರಸ್ಟಿಗಳಾದ ಶಿವಾನಂದ ಪ್ರಭು, ಮನೋಜ್ ಶೆಣೈ, ವಿಶ್ವ ಹಿಂದೂ ಪರಿಷತ್‍ನ ಮೂಡುಬಿದಿರೆ ಪ್ರಖಂಡದ ಕಾರ್ಯಾಧ್ಯಕ್ಷ ಶ್ಯಾಮ್ ಹೆಗ್ಡೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿ, ಬಿಜೆಪಿ ನಗರ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಹರೀಶ್ ಎಂ.ಕೆ ಸಹಿತ ಭಕ್ತರು ಪಾಲ್ಗೊಂಡರು.


