ಸುದ್ದಿ9 ಬಂಟ್ವಾಳ: ತಾಲ್ಲೂಕಿನ ಮೂಜರ್ೆ ಸಮೀಪದ ನೈನಾಡು ಗೇರುಬೀಜ ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದ ಕಾರ್ಮಿಕರೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಘಟನೆ ಗುರುವಾರ ನಡೆದಿದೆ. ತಾಲ್ಲೂಕಿನ ಮೂಡುನಡುಗೋಡು ಗ್ರಾಮದ ಎರ್ಮನಡು ನಿವಾಸಿ ದಿ.ಶ್ಯಾಮ ಶೇರಿಗಾರ್ ಎಂಬವರ ಪುತ್ರ ಜಯಂತ ಸಪಲ್ಯ(50) ಎಂಬವರು ಕಳೆದ ಶನಿವಾರ ಬೆಳಿಗ್ಗೆ ಎಂದಿನಂತೆ ನೈನಾಡು ಗೇರುಬೀಜ ಕಂಪೆನಿಗೆ ಕೆಲಸಕ್ಕೆ ಹೋಗಿದ್ದು, ಸಂಜೆ ಆರು ಗಂಟೆಗೆ ಕೆಲಸ ಬಿಟ್ಟ ಬಳಿಕ ಮನೆಗೆ ಬಾರದೆ ಅಲ್ಲಿಂದಲೇ ನಾಪತ್ತೆಯಾಗಿದ್ದಾರೆ ಎಂದು ಇವರ ಪತ್ನಿ ಬೇಬಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ಇವರ ಮೂವರು ಮಕ್ಕಳ ಪೈಕಿ ಪುತ್ರ ಪುಂಜಾಲಕಟ್ಟೆ ವಸ್ತ್ರ ಮಳಿಗೆಯೊಂದರಲ್ಲಿ ದುಡಿಯುತ್ತಿದ್ದು, ಇಬ್ಬರು ಪುತ್ರಿಯರಲ್ಲಿ ಒಬ್ಬಾಕೆಗೆ ವಿವಾಹವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

By Suddi9

Leave a Reply

Your email address will not be published. Required fields are marked *