ಬಂಟ್ವಾಳ: ಪ್ರಧಾನಮಂತ್ರಿಯಾಗಿ ಎರಡನೇ ಬಾರಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದ ಸಂಭ್ರಮದ ಹಿನ್ನಲೆಯಲ್ಲಿ ಗುರುವಾರ  ಸಂಜೆ ಇಡೀ ಬಂಟ್ವಾಳ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರಷ್ಟೇ ಅಲ್ಲ, ಮೋದಿ ಅಭಿಮಾನಿಗಳೂ ಸಂಭ್ರಮಾಚರಣೆಯಲ್ಲಿ ತೊಡಗಿದರು.

WhatsApp Image 2019-05-30 at 18.44.56 (1) (1)

ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಎದುರಲ್ಲಿ ಸಂಜೆಯಿಂದಲೇ ಬಿಜೆಪಿ ಕಾರ್ಯಕರ್ತರು ಚಾ, ಪಕೋಡಾ ವಿತರಿಸಲು ಆರಂಭಿಸಿದ್ದರು. ದೇವಸ್ಥಾನದ ಸನ್ನಿಧಿಯಲ್ಲಿ ದೇವರನಾಮಗಳ ಭಜನಾ ಸಂಕೀರ್ತನೆ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಕ್ಷೇತ್ರಾಧ್ಯಕ್ಷ ದೇವದಾಸ ಶೆಟ್ಟಿ,ಪುರಸಭಾ ಸದಸ್ಯ ಗೋವಿಂದ ಪ್ರಭು,ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಜಿಪಂ ಸದಸ್ಯೆ ಕಮಲಾಕ್ಷಿ ಪೂಜಾರಿ, ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಪಕ್ಷದ ಪ್ರಮುಖರಾದ   ಉದಯಕುಮಾರ್ ರಾವ್ ಬಂಟ್ವಾಳ,   ರಾಮದಾಸ ಬಂಟ್ವಾಳ, ದಿನೇಶ್ ಅಮ್ಟೂರು, ಮೋನಪ್ಪ ದೇವಸ್ಯ, ರಂಜಿತ್ ಮೈರ, ರಮಾನಾಥ ರಾಯಿ, ಸುದರ್ಶನ ಬಜ,            ಪ್ರಮೋದ್ ಕುಮಾರ್ ಅಜ್ಜಿ ಬೆಟ್ಟು,ವಸಂತ ಅಣ್ಣಳಿಕೆ,  ನಾರಾಯಣ ಪೂಜಾರಿ ಬೊಳ್ಳುಕಲ್ಲು,ಗೋಪಾಲ ಸುವರ್ಣ,ಮಹಾಬಲ ಶೆಟ್ಟ ಸಹಿತ ಪುರಸಭೆ ಸದಸ್ಯರು, ಕಾರ್ಯಕರ್ತರು, ಮೋದಿ ಅಭಿಮಾನಿಗಳು ಈ ಸಂದರ್ಭ ಉಪಸ್ಥಿತರಿದ್ದರು.

IMG-20190530-WA0043 ಬಳಿಕ ಶ್ರೀ ರಕ್ತೇಶ್ವರೀ ದೇವಿಗೆ ಪ್ರದಾನಿ ನರೇಂದ್ರ ಮೋದಿ ಹೆಸರಿನಲ್ಲಿ ವಿಶೇಷ ರಂಗಪೂಜೆ , ಪ್ರಾರ್ಥನೆ ನಡೆಯಿತು.   ಹಾಗೆಯೇ ಮಲ್ಲಿಗೆ ಪ್ರಿಯ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ದೇವಳದಲ್ಲಿಯು ಪ್ರದಾನಿ ಮೋದಿ ಹೆಸರಿನಲ್ಲಿ ಇಡೀ ದಿನದ ಸೇವೆ ನಡೆಯಿತು.ಪಾಣೆಮಂಗಳೂರು ವೀರವಿಠಲ ದೇವಸ್ಥಾನದಲ್ಲೂ ಮೋದಿ ಹೆಸರಿನಲ್ಲಿ ರಂಗಪೂಜೆ ಸಹಿತ ಪೂಜಾ ಕೈಂಕರ್ಯ ನಡೆಯಿತು. ಬಂಟ್ವಾಳ ಬಡ್ಡಕಟ್ಟೆ,ಫರಂಗಿಪೇಟೆಯಲ್ಲಿ ಎಲ್ ಸಿಡಿ ಮೂಲಕ ಮೋದಿ ಸಹಿತ ಸಚಿವ ಸಂಪುಟ ಸೇರಲಿರುವವರ ಪ್ರಮಾಣವಚನದ ನೇರ ಪ್ರಸಾರಕ್ಕೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

By suddi9

Leave a Reply

Your email address will not be published. Required fields are marked *