ಎಸ್ ಡಿ ಎಂ ಮಂಗಳಜ್ಯೋತಿ ಐ ಟಿ ಐ ಸಂಸ್ಥೆ, ವಾಮಂಜೂರು ಇಲ್ಲಿನ 2018 -19 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಜರಗಿತು. ಕಾರ್ಯಕ್ರಮದ ವiುಖ್ಯ ಅತಿಥಿಯಾಗಿ ಭಾಗವಹಿಸಿದ ಸೈಂಟ್ ಅಲೋಶಿಯಸ್ ಐಟಿಐನ ತರಬೇತಿ ಅಧಿಕಾರಿಯಾದ ರೋಶನ್ ಡಿ ಸೋಜಾ ಅವರು ಮಾತನಾಡುತ್ತಾ ಕೌಶಲ್ಯಾಧಾರಿತ ಕೈಗಾರಿಕಾ ತರಬೇತಿಹೊಂದಿದ ಯುವಪಡೆ ಅಗತ್ಯ ಇಂದಿನ ಕೈಗಾರಿಕಾ ವಲಯಕ್ಕಿದೆ. ಉದ್ಯೋಗದಾತ ಸಂಸ್ಥೆಗಳು ಉತ್ತಮ ಅಭ್ಯರ್ಥಿಗಳನ್ನು ನಿರೀಕ್ಷಿಸುತ್ತವೆ, ಹಾಗಾಗಿ ವಿದ್ಯಾರ್ಥಿಗಳು ಒಳ್ಳೆಯ ವರ್ತನೆ, ವಿಧೇಯತೆ ಹಾಗೂ ದುಡಿಯುವ ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆ ಆಡಳಿತಾಧಿಕಾರಿ ಗಣೇಶ್ ಭಟ್ ಮಾತನಾಡಿ ದೇಶದಲ್ಲಿ ಸಾಕಷ್ಟು ನೇರ ವಿದೇಶೀ ಹೂಡಿಕೆಯಾಗುತ್ತಿದ್ದು ಕೈಗಾರಿಕಾ ಅಭಿವೃದ್ಧಿಯಾಗುತ್ತಿದೆ. ಇದು ಕೈಗಾರಿಕಾ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಭಾರೀ ಉದ್ಯೋಗಾವಕಾಶಗಳನ್ನು ತೆರೆದಿದೆ ಎಂದರು. ಕಾರ್ಯಕ್ರವi ದ ಅಧ್ಯಕ್ಷ ಸ್ಥಾನವನ್ನು ಸಂಸ್ಥೆಯ ಮುಖ್ಯ ಕಾರ್ಯದರ್ಶಿಗಳಾದ ಪೆÇ್ರೀ ಎ.ರಾಜೇಂದ್ರ ಶೆಟ್ಟಿ ಇವರು ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ನರೇಂದ್ರ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರೆ ,ವಿದ್ಯುತ್ಕರ್ಮಿ ವಿಭಾಗದ ಶಿಕ್ಷಣಾರ್ಥಿ ಚರಣ್ ಧನ್ಯವಾದ ಅರ್ಪಣೆಗೈದರು. ಎಮ್ .ಎಮ್ ವಿ ವಿಭಾಗದ ಶಿಕ್ಷಣಾರ್ಥಿ ಚೇತನ್ ಕಾರ್ಯಕ್ರಮವನ್ನು ನಿರೂಪಿಸಿದರು.

