ರಜೆ ಕಳೆದು ಶಾಲೆ ಪ್ರಾರಂಭವಾಗುವ ಸಮಯದಲ್ಲಿ ಶಾಲಾ ಮಕ್ಕಳನ್ನು ಗುರುತಿಸಿ ಪೆÇ್ರತ್ಸಾಹಿಸುವ ಕಾರ್ಯಕ್ರಮ ವiಕ್ಕಳಲ್ಲಿ ಹಾಗೂ ಪೆÇೀಷಕರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿಯನ್ನು ಮೂಡಿಸುತ್ತದೆ. ಮಕ್ಕಳಿಗೆ ಸರಿಯಾದ ಪೆÇ್ರೀತ್ಸಾಹ ಹಾಗೂ ಮಾರ್ಗದರ್ಶನ ನೀಡಿದಾಗ ಮಾತ್ರ ಸಶಕ್ತ ವಿಧ್ಯಾವಂತ ಯುವ ಜನತೆ ಮೂಡಿ ಬರಲು ಸಾಧ್ಯ ಎಂದು ಫರಂಗಿಪೇಟೆಯ ತೃಪ್ತಿ ಕನ್ಸಟ್ರಕ್ಷನ್ಸ್ ಮಾಲಕ ತಾರಾನಾಥ ಕೊಟ್ಟಾರಿ ತಿಳಿಸಿದರು
ಶ್ರೀ ತಾರಾನಾಥ ಕೊಟ್ಟಾರಿ ಅವರು ಅರ್ಕುಳ ಚಾರಿಟೇಬಲ್ ಟ್ರಸ್ಟ್‍ಆಶ್ರಯದಲ್ಲ್ಲಿಇತ್ತೀಚೆಗೆ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿದೈವಸ್ಥಾನದಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣಾಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಕಾರ್ಯಕ್ರಮದಲ್ಲಿ72 ಅರ್ಹ ವಿಧ್ಯಾರ್ಥಿಗಳಿಗೆ ಉಚಿತವಾಗಿ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು.
ಬಂಟ್ವಾಳ ತಾಲೂಕು ಬಿಎಸ್ಸೆನೆಲ್ ಮಾರುಕಟ್ಟೆ ಅಧಿಕಾರಿ ಕಂಪ ಸದಾನಂದ ಆಳ್ವ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಇಂದಿನ ವಿಧ್ಯಾರ್ಥಿಗಳಿಗೆ ವಿಧ್ಯಾಭ್ಯಾಸ ಹಾಗೂ ಉದ್ಯೋಗಕ್ಕೆ ವಿಪುಲ ಅವಕಾಶಗಳಿದ್ದು ವಿಧ್ಯಾರ್ಥಿಗಳು ಹಾಗೂ ಹೆತ್ತವರು ಈ ಬಗ್ಗೆ ತಿಳಿದುಕೊಂಡು ಕಾರ್ಯೋನ್ಮುಕರಾಗಬೇಕುಎಂದುಕರೆ ನೀಡಿದರು.

ಅರ್ಕುಳ ಚಾರಿಟೇಬಲ್ ಟ್ರಸ್ಟ್‍ನಅಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಅರ್ಕುಳಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀವ್ಮತಿ ಆಶಾ ಪ್ರಕಾಶ್, ಮನೋಜ್ ತುಪ್ಪೆಕಲ್ಲು, ಆಶಾ ತುಪ್ಪೆಕಲ್ಲು ಮೊದಲಾದವರಿದ್ದರು.ಮಂಟಮೆ ದಿನಕರ ಕರ್ಕೇರ ನಿರ್ವಹಿಸಿದ ಕಾರ್ಯಕ್ರಮದ ಕೊನೆಗೆ ಸ್ವಸಹಾಯ ಗುಂಪುಗಳ ಮೇಲ್ವಿಚಾರಕಿ ಶ್ರೀಮತಿ ಶೋಭಾ ಅವರು ವಂದಿಸಿದರು.

