ಬಂಟ್ವಾಳ : ಧಾರ್ಮಿಕತೆಯಲ್ಲಿ ಯುವಶಕ್ತಿ ಕ್ರೀಯಾಶೀಲರಾಗಿದ್ದು, ಧರ್ಮದ ಪುನರುತ್ಥಾನಕ್ಕೆ ಯುವ ಶಕ್ತಿ ಎದ್ದು ನಿಲ್ಲಬೇಕು ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು.
ಸುಮಾರು 3 ಕೋಟಿ ರೂ. ವೆಚ್ಚದಲ್ಲಿ, ತೌಳವ ದ್ರಾವಿಡ ಶೈಲಿಯಲ್ಲಿ, ಸಂಪೂರ್ಣ ಶಿಲಾಮಯವಾಗಿ ಪುನರ್ನಿರ್ಮಾಣಗೊಂಡಿರುವ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮಬೈ ದರ್ಕಳ ಗರಡಿ ಕ್ಷೇತ್ರದಲ್ಲಿ ಮಂಗಳವಾರ ರಾತ್ರಿ ಬ್ರಹ್ಮಕಲಶೋತ್ಸವದ ಸಮಾರೋಪದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

2205pkt1(Kakyapdavu Garadi)

ತುಳುನಾಡು ಧರ್ಮಚಾವಡಿ. ಆರಾಧನಾಲಯಗಳ ನಿರ್ಮಾಣದಿಂದ ಕಕ್ಯಪದವು ಭಕ್ತಿ ಪದವು ಆಗಿದೆÉ ಎಂದು ಹೇಳಿದ ಅವರು ಹರಿಯುವ ನೀರಿನಂತೆ ಧರ್ಮ ನಿರಂತರ ಚಲನಶೀಲವಾಗಿದ್ದು, ಬದುಕಿನಲ್ಲಿ ಧರ್ಮದ ಅನುಷ್ಠಾನದಿಂದ ಉತ್ತಮ ಫಲಗಳು ಲಭಿಸುತ್ತದೆ. ಧರ್ಮ ಬದ್ದತೆ ಇದ್ದರೆ ರಾಷ್ಟ್ರ ಉಳಿಯುತ್ತದೆ ಎಂದರು.
ಹೇಳಿದರು.
ಮಾಜಿ ಸಚಿವ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ. ರಮಾನಾಥ ರೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಊರ ಪರವೂರ ಭಕ್ತರ ಸಹಕಾರದಿಂದ ಸುಂದರ, ವಿಶಿಷ್ಠ ಗರಡಿ ನಿರ್ಮಾಣಗೊಂಡು ಬ್ರಹ್ಮಕಲಶೊತ್ಸವ ಯಶಸ್ವಿಯಾಗಿದೆ. ಗ್ರಾಮದ ಅಭಿವೃದ್ಧಿಗೂ ಇದು ಪೂರಕವಾಗಿದೆ ಎಂದು ಹೇಳಿದರು.
ಹಿಂದೆ ಉದಯವಾಣಿ ಪತ್ರಿಕೆಯಿಂದ ಕುಗ್ರಾಮವೆಂದು ಗುರುತಿಸಲ್ಪಟ್ಟ ಉಳಿ ಗ್ರಾಮ ಇಂದು ಹಂತ ಹಂತವಾಗಿ ಅಭಿವೃದ್ಧಿ ಹೊಂದಿದೆ. ಈ ಭಾಗದ ಶಾಸಕನಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಅಂತೆಯೇ ಗರಡಿಯ ಪುನರುತ್ಥಾನ ಕಾರ್ಯ ನಡೆಸಿದ ಸಂತೃಪ್ತಿಯಿದೆ ಎಂದರು.

2205pkt2
ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಜಿ. ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ರೋಟರಿ ಕ್ಲಬ್ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ, ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಕೋಟ್ಯಾನ್, ಜಿ.ಪಂ.ಮಾಜಿ ಸದಸ್ಯ ಕೆ.ಪಿ.ಜಗದೀಶ ಅ„ಕಾರಿ ಮೂಡುಬಿದಿರೆ, ಗೃಹರಕ್ಷದಳದ ಜಿಲ್ಲಾ ಕಮಾಂಡೆಂಟ್ ಡಾ.ಮುರಳಿ ಮೋಹನ್ ಚೂಂತಾರು, ಬೆಂಗಳೂರು ಉದ್ಯಮಿ ಉದಯ ಹೆಗ್ಡೆ, ಎಲ್‍ಸಿಆರ್ ಇಂಡಿಯನ್ ಸ್ಕೂಲ್ ಸಂಚಾಲಕ ರೋಹಿನಾಥ ಪಾದೆ, ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬÉೈಲು, ಕಿಟ್ಟೆಲ್ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ವಿಠಲ ಅಬುರ ಉದ್ಯಮಿ ಸಂಜೀವ ಪೂಜಾರಿ ಗುರುಕೃಪಾ, ತಾ.ಪಂ.ಸದಸ್ಯೆ ಬೇಬಿ ಕೃಷ್ಣಪ್ಪ, ಮುಂಬಯಿ ಉದ್ಯಮಿ ನಿತ್ಯಾನಂದ ಪೂಜಾರಿ ಕೆಂತಲೆ,ಆಯುಷ್ ವೈದ್ಯಾ„ಕಾರಿ ಡಾ.ರಾಜೇಶ್ ಬಾರ್ದಿಲ, ಉದ್ಯಮಿ ವಾಸುದೇವ ಭಟ್ ಕುಂಜತ್ತೋಡಿ, ನಿವೃತ್ತ ಶಿಕ್ಷಕ ಕೃಷ್ಣಪ್ಪ ಪೂಜಾರಿ ಪಟ್ಟದಬÉೈಲು, ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ವ್ಯವಸ್ಥಾಪಕ ಪುಷ್ಪರಾಜ ಶೆಟ್ಟಿ, ವೆನ್‍ಲಾಕ್ ಸರಕಾರಿ ಆಸ್ಪತ್ರೆಯ ಯೂರಾಲಜಿಸ್ಟ್ ಡಾ.ಸದಾನಂದ ಪೂಜಾರಿ, ಮೋನಪ್ಪ ಪೂಜಾರಿ ಕಲಾಯಿಗುತ್ತು, ಗುತ್ತಿಗೆದಾರ ರವಿ ಕಕ್ಯಪದವು, ಶ್ರೀ ಕ್ಷೇತ್ರ ಕಾರಿಂಜ ದೇವಸ್ಥಾನದ ವ್ಯವಸ್ಥಾಪನ ಪಿ. ಜಿನರಾಜ ಆರಿಗ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಕಾರ್ಯಾಧ್ಯಕ್ಷ ಬಿ. ಪದ್ಮಶೇಖರ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

4O1A9299
ಈ ಸಂದರ್ಭದಲ್ಲಿ ಸೇಸಪ್ಪ ಕೋಟ್ಯಾನ್, ಕೆ.ಮಾಯಿಲಪ್ಪ ಸಾಲ್ಯಾನ್, ಬಿ. ಪದ್ಮಶೇಖರ ಜೈನ್, ರೋಹಿನಾಥ ಪಾದೆ, ಸಂಜೀವ ಪೂಜಾರಿ ಗುರುಕೃಪಾ, ಚಂದ್ರಶೇಖರ್ ಕಂರ್ಬಡ್ಕ, ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ ಮಜಲು ,ಶ್ವೇತಾ ವಿಶ್ವನಾಥ್, ಹರೀಶ್ಚಂದ್ರ ಕೇರ್ಯ ಅವರನ್ನು ಸಮ್ಮಾನಿಸಲಾಯಿತು.
ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎ.ಚೆನ್ನಪ್ಪ ಸಾಲ್ಯಾನ್ ಸ್ವಾಗತಿಸಿದರು, ರಾಜೀವ ಕಕ್ಯಪದವು ಸಮ್ಮಾನ ಪತ್ರ ವಾಚಿಸಿದರು. ಸಮಿತಿ ಉಪಾಧ್ಯಕ್ಷ ಕೆ.ಮೋನಪ್ಪ ಪೂಜಾರಿ ಕಂಡೆತ್ಯಾರು ವಂದಿಸಿದರು. ಟಿ.ವಿ.ನಿರೂಪಕ ಚೇತನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *