ಬಂಟ್ವಾಳ: : ತುಳುನಾಡಿನಲ್ಲಿ ದೈವ – ದೇವರುಗಳ ಕ್ಷೇತ್ರಗಳು ಹಳ್ಳಿ ಹಳ್ಳಿಯಲ್ಲಿರುವುದರಿಂದ ಇಲ್ಲಿನ ಜನತೆಯು ನೆಮ್ಮದಿ ವಾತಾವರಣ, ಸ್ವಾಭಿಮಾನದ ಬದುಕಿನಲ್ಲಿ ಜೀವನ ನಡೆಸುತ್ತಾರೆ. ಕೋಟಿ – ಚೆನ್ನಯರ  ನಡೆದುಕೊಂಡು ಬಂದ ಸತ್ಯ ಧರ್ಮವನ್ನು ಶಾಶ್ವತವಾಗಿ ಉಳಿಸಲು ಇಂತಹ ಗರಡಿಗಳಿಂದ ಸಾಧ್ಯ ಎಂದು ಬಲ್ಯೊಟ್ಟು ಕ್ಷೇತ್ರದ ವಿಖ್ಯಾತಾನಂದ ಸ್ವಾಮೀಜಿ ನುಡಿದರು.    ಕಕ್ಯಪದವಿನಲ್ಲಿರುವ ಕಡಂಬಿಲ್ತಾಯ, ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಸಭಾಕಾರ್ಯಕ್ರಮದಲ್ಲಿ ಆಶೀರ್ವಚನಗೈದ ಶ್ರೀ ಗಳು  ತುಳುನಾಡಿನಲ್ಲಿ ಇರುವ ಸಂಸ್ಕೃತಿಗೆ ಎಂದೂ ನಾಶವಿಲ್ಲ. ಮನುಷ್ಯನ ಜೀವನ ಪೂರ್ತಿ ಸತ್ಯ, ಧರ್ಮ, ನ್ಯಾಯಗಳ ಒಳಿತಿಗಾಗಿ ಶ್ರಮಿಸಬೇಕು ಎಂದರು .
IMG_20190520_210928_HDR (1)
ಕ್ಷೇತ್ರದ ಗೌರವಾಧ್ಯಕ್ಷ ,ಮಾಜಿ ಸಚಿವ ಮಾಜಿ ಸಚಿವ ರಮಾನಾಥ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಯುವಕರು ಇತಿಹಾಸವನ್ನು ತಿಳಿದುಕೊಳ್ಳಬೇಕು. ಇತಿಹಾಸವನ್ನು ತಿಳಿದುಕೊಂಡರೆ ಮಾತ್ರ ಸಮಾಜಕ್ಕೆ ಮಾತ್ರ ಪಾಠವನ್ನು ಹೇಳಬಹುದು ಎಂದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೇಬಿ ಕುಂದರ್, ಕಲಸ ಜಿ.ಪಂ. ಸದಸ್ಯಪ್ರಭಾಕರ ಗೌಡ, ರಾಜ್ಯ ಧಾರ್ಮಿ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಉದ್ಯಮಿಗಳಾದ ಜಗನ್ನಾಥ ಚೌಟ, ರಾಜವೀರ್ ಜೈನ್, ನಿವೃತ್ತ  ಉಪನ್ಯಾಸಕ   ತುಕರಾಮ್ ಪೂಜಾರಿ, ಪೀರ್‍ದೊಟ್ಟುಗುತ್ತು ಪ್ರಕಾಶ್ ಕುಮಾರ್ ಜೈನ್, ಬಂಟ್ವಾಳ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ದನಲಕ್ಷ್ಮೀ ಸಿ. ಬಂಗೇರ, ತಾಲೂಕು ಪಂಚಾಯತ್ ಸದಸ್ಯೆ ಸ್ವಪ್ನ ವಿಶ್ವನಾಥ, ದಾಮೋದರ ಸಾಲ್ಯಾನ್, ಪ್ರಶಾಂತ್ ಪುಂಜಾಲಕಟ್ಟೆ, ಬಟ್ಯಪ್ಪ ಪೂಜಾರಿ, ಸಂಪತ್ ಸುವರ್ಣ, ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ ಜೈನ್, ಸದಾನಂದ ಪೂಜಾರಿ ಕೊರಂತಬೆಟ್ಟು, ಬಾಬು ಪೂಜಾರಿ ಗೌಡೊಡಿ, ಹರೀಶ್ ಪೂಜಾರಿ ಮುಂಬಾಯಿ ಉಪಸ್ಥಿತರಿದ್ದರು.
 . ಮೋನಪ್ಪ ಪೂಜಾರಿ ಸ್ವಾಗತಿಸಿದರು.  ಶಿವರಾಜ್ ಗಟ್ಟಿ    ನಿರ್ವಹಿಸಿದರು.  ಬಳಿಕ ಹಾಸ್ಯ ಹಬ್ಬ ನಡೆಯಿತು.

By Suddi9

Leave a Reply

Your email address will not be published. Required fields are marked *