ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಯಂಗಡಿಯಲ್ಲಿ ಪುತ್ತಿಗೆ ಕುಡಿಯುವ ನೀರಿನ ಟ್ಯಾಂಕ್‍ಗೆ ಬಿದ್ದ ಗಿಡುಗ ಹಕ್ಕಿಯನ್ನು ಸ್ಥಳೀಯ ದಂಪತಿ ರಕ್ಷಿಸಿದ್ದಾರೆ.

giduga
ಗುಡ್ಡೆಯಂಗಡಿ ಕಿರುಸೇತುವೆಯ ಬಳಿ ಪಂಚಾಯಿತಿಯವರು ನಿರ್ಮಿಸಿದ್ದ ಕುಡಿಯುವ ನೀರಿನ ಟ್ಯಾಂಕ್‍ಗೆ ಶುಕ್ರವಾರ ಗಿಡುಗ ಹಕ್ಕಿ ಬಿದ್ದಿತ್ತು. ಮೇಲ್ನೋಟಕ್ಕೆ ಅದು ಸತ್ತಿರುವ ರೀತಿ ಕಂಡು ಬಂದಿದ್ದು, ಸ್ಥಳೀಯ ಪ್ರಥ್ವಿರಾಜ್ ಜೈನ್ ಅವರು ಪಂಚಾಯಿತಿ ಸದಸ್ಯರಿಗೆ. ಆದರೆ ಸಾಯಂಕಾಲವರೆಗೆ ಪಂಚಾಯಿತಿಯವರು ಹಕ್ಕಿಯನ್ನು ತೆಗೆಯದೇ ಇರುವುರಿಂದ ಪ್ರಥ್ವಿ ಅವರು ಮತ್ತೊಮ್ಮೆ ಟ್ಯಾಂಕ್ ಬಂದು ಗಮನಿಸಿದ, ಗಿಡುಗ ಮೊದಲಿದ್ದ ಸ್ಥಳದಲ್ಲಿ ಇರದೇ ಇನ್ನೊಂದು ಕಡೆ ಇತ್ತು. ಹಕ್ಕಿ ಜೀವಂತವಾಗಿ ಇರುವುದನ್ನು ಗಮನಿಸಿದ ಟ್ಯಾಂಕ್‍ಗೆ ಬುಟ್ಟಿ ಇಳಿಸಿ ಹೊರ ತೆಗೆದಿದ್ದಾರೆ. ಬಳಿಕ ಮನೆಯ ತಂದು ಉಪಚರಿಸಿದ್ದಾರೆ. ಅದು ಚೇತರಿಕೆ ಕಂಡು ಬಂದ ನಂತರ ಅದನ್ನು ಹಾರಿ ಬಿಟ್ಟಿದ್ದಾರೆ. ಪತ್ನಿ ಪದ್ಮಿನಿ ಜೈನ್ ಅವರು ಹಕ್ಕಿಯ ರಕ್ಷಣೆಗೆ ಸಹಕರಿಸಿದ್ದಾರೆ.
ಟ್ಯಾಂಕ್ ಯಾವುದೇ ಮೇಲ್ಭಾಗವನ್ನು ಮುಚ್ಚದಿರುವುದರಿಂದ ನೀರು ಕುಡಿಯಲು ಬರುವ ಪಕ್ಷಿಗಳು ಬೀಳುತ್ತಿವೆ. ಮತ್ತೊಂದೆಡೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರೂ ಸಕಾಲದಲ್ಲಿ ಸ್ಪಂದಿಸದಿರುವುದು ಪಂಚಾಯಿತಿಯ ಅಧಿಕಾರಿಗಳು, ಸದಸ್ಯರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.
ಎಂಬಿಎ ಪದವೀದರ ಪ್ರಥ್ವಿ ಜೈನ್ ಎರಡು ವರ್ಷಗಳ ಹಿಂದೆ ತಮ್ಮ ಸ್ವಂತ ಖರ್ಚಿನಲ್ಲಿ ಅಂತರ್ಜಲ ವೃದ್ಧಿ ಕಾಮಗಾರಿಗೆ ಶ್ರಮಿಸಿದ್ದು, ಸ್ಥಳೀಯ ಕೃಷಿಕರಿಗೆ ನೀರಿನ ಅಭಾವ ಅನುಭವಿಸುವುದು ತಪ್ಪಿತ್ತು.

By suddi9

Leave a Reply

Your email address will not be published. Required fields are marked *