ಬಂಟ್ವಾಳ : ಪ್ರಧಾನ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಡಿ.ಎಸ್ ಅವರು ಹಾಸನ ಜಿಲ್ಲೆಯ ಆಲೂರು ತಾಲೂಕು ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುವ ಪ್ರಯುಕ್ತ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ಬಂಟ್ವಾಳ ದ ನ್ಯಾಯಾಲಯದ ಸಿಬ್ಬಂದಿ ಪರವಾಗಿ ಬೀಳ್ಕೊಡುಗೆ ಸಮಾರಂಭ ನ್ಯಾಯಾಲಯದ ಆವರಣದಲ್ಲಿ ಜರಗಿತು.
ಈ ಸಂದರ್ಭದಲ್ಲಿ ನ್ಯಾಯಾಲಯದ ಆಡಳಿತಾಧಿಕಾರಿ ಆಶಾ.ಕೆ.ಪಿ, ವಿಜಯಕುಮಾರ್, ಶಂಕರ್ ಎನ್.ಎಚ್, ನರಸೇಗೌಡ ಎಲ್., ಅನಿಲ್ ಕುಮಾರ್, ಮುಕ್ತಾ ಎಂ.ರಾವತ್, ಮಂಜುಳಾ ಎ.ಎನ್, ನಮಿತಾ ಬಿ., ಗಾಯತ್ರಿ ಬಿ., ಲಿಖಿತಾ ಕೆ, ಹರಿಣಾಕ್ಷಿ, ಶಾಂತಾ, ಪದ್ಮಲತಾ, ಪೋಡಿಯ ಗೌಡ ಮತ್ತಿತರರು ಉಪಸ್ಥಿತರಿದ್ದರು.
