ಬಂಟ್ವಾಳ:ಬಂಟ್ವಾಳ ವಿದ್ಯಾಗಿರಿಯಲ್ಲಿರುವ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ ಗೆ ಸೋಮವಾರ ಪ್ರಕಟಗೊಂಡ ಸಿಬಿಎಸ್‌ಇ ೧೦ನೇ ತರಗತಿ ಪರೀಕ್ಷೆಯಲ್ಲಿ ಸತತ ೮ನೇ ಬಾರಿ ಶೇ.೧೦೦ ಫಲಿತಾಂಶ ದೊರಕಿದೆ.
ಶ್ರೀ ವೆಂಕಟರಮಣ ಸ್ವಾಮಿ ವಿದ್ಯಾವರ್ಧಕ ಸಂಘ(ರಿ) ಬಂಟ್ವಾಳದಡಿ ಕಾರ್ಯಾಚರಿಸುತ್ತಿರುವ ಈ ಶಾಲೆಯಿಂದ ಪರೀಕ್ಷೆಗೆ ಹಾಜರಾದ ೪೩ ವಿದ್ಯಾರ್ಥಿಗಳಲ್ಲಿ ೨೦ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಚಿನ್ಮಯಿ ಡಿ ಶೇ. ೯೫.೮, ತರುಣ್ ಪಿ ಹೊಳ್ಳ ಶೇ.೯೪.೮, ಸೂರಜ್ ಎಸ್ ಅಂಕಲಿ ಶೇ. ೯೪ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪ್ರಾಂಶುಪಾಲೆ ರಮಾಶಂಕರ್ ಸಿ ತಿಳಿಸಿದ್ದಾರೆ

