ಬಂಟ್ವಾಳ: ಬಿ.ಸಿ.ರೋಡು ಶ್ರೀ ರಾಮ ಭಕ್ತಾಂಜನೇಯ ವ್ಯಾಯಾಮ ಶಾಲೆಯ ವತಿಯಿಂದ ಬಿ.ಸಿ.ರೋಡಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ತೃತೀಯ ವರ್ಷದ ರಾಜ್ಯ ಮಟ್ಟದ ಗ್ರೀಪ್ ಮಾದರಿಯ ಮುಕ್ತ ಹಗ್ಗ- ಜಗ್ಗಾಟವು ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಖುದ್ದು ಹಗ್ಗ ಎಳೆಯವ ಮೂಲಕ ಉದ್ಘಾಟಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದರು. 
ಆರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರ ಭಟ್,ಉದ್ಯಮಿಗಳಾದ ಸತೀಶ್ ಭಂಡಾರಿ,ಲೋಕನಾಥ ಶೆಟ್ಟಿ,ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ದಿನೇಶ್ ಅಮ್ಟೂರು,
ಯಶ್ಪಾಲ್ ಸುವರ್ಣ ಮಲ್ಪೆ, ಮಂಜು ಕೊಳ ಮಲ್ಪೆ, ರಮೇಶ್ ನಾಯ್ಕ್, ಅಭಿಷೇಕ್ ರೈ, ಚಂದಪ್ಪ ಪೂಜಾರಿ, ಮಾಧವ ಸಾಲ್ಯಾನ್, ಜಿ.ಆನಂದ ,ಇಂದ್ರೇಶ್, ಪುರಸಭಾ ಸದಸ್ಯೆ ವಿದ್ಯಾವತಿ, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು ಮೊದಲಾದವರು ಭಾಗವಹಿಸಿದ್ದರು. ಪ್ರದೀಪ್ ಅಜ್ಜಿಬೆಟ್ಟು,ಪ್ರಣಾಮ್ ಮತ್ತಿತರರಿದ್ದರು.
ಇದೇ ವೇಳೆ ಭಾರತ ಸೇನೆಯ ಯೋಧರಾದ ಸುಭೇದಾರ್ ಮೇಜರ್ ದಿಲ್ಬಾಗ್ ಸಿಂಗ್ ಮಾಲ್ಕೀ, ನೈಬ್ ಸುಭೇದಾರ್ ಜಿ.ಕೆ ಶರ್ಮಾ, ಹಾವಲ್ದರ್ ಡಿಕ್ಕಿ.ಸಿ.ಎನ್ ಮಾರಕ್ ಇವರನ್ನು ಸಮ್ಮಾನಿಸಲಾಯಿತು
ಬಹುಮಾನ ವಿಜೇತರು: ಈ ಪಂದ್ಯಾಟದಲ್ಲಿ ಜೈ ವೀರಮಾರುತಿ ಕೈಪುಂಜಾಲ್ ಕಾಪು ಪ್ರಥಮ ಸ್ಥಾನ,ಫ್ರೆಂಡ್ಸ್ ಕಾಡಬೆಟ್ಟು ದ್ವಿತೀಯ ಸ್ಥಾನ ಪಡೆಯಿತು.
ಅಂಜನೇಯ ಕಣ್ವತೀರ್ಥ ತೃತೀಯ,ನಮ್ಮ ಜವನೆರ್ ಮಂಜನಕಟ್ಟೆ ಚತುರ್ಥ,ಭಾರ್ಗವ ಫ್ರೆಂಡ್ಸ್ ಒಡಿನ್ನಾಳ ಐದನೇ,ಯುವ ಸ್ಪೂರ್ತಿ ಬೆಳ್ಳೆ ಆರನೇ,ವೀರಾಂಜನೇಯ ಬೀರಿ ಏಳನೇ ಹಾಗೂಅನುಗ್ರಹ ಚೆಲ್ಲೂರು ಎಂಟನೆ ಸ್ಥಾನ ಪಡೆದಿದೆ ಎಂದು ಪ್ರಕಟಣೆ ತಿಳಿಸಿದೆ.ಹಾಗೆಯೇ ಚಿಕ್ಕಯ್ಯ ಮಠ ಬಿ.ಸಿ.ರೋಡ್,ನಮ್ಮ ಜವನೆರ್ ‘ಬಿ’ ಮತ್ತು ಯುವ ಸ್ಪೂರ್ತಿ ‘ಬಿ’ ತಂಡ ಸಮಾಧಾನಕರ ಬಹುಮಾನ ಹಾಗೂ
ಸಾಯಿ ಫ್ರೆಂಡ್ಸ್ ಬಂದಾರು ಉತ್ತಮ ಶಿಸ್ತಿನ ತಂಡ ಬಹುಮಾನ ಪಡೆದರೆ,ನಿತಿನ್ ಕಣ್ವತೀರ್ಥ,
ಅಶ್ವಿನ್ ಕಾಡಬೆಟ್ಟು ಮತ್ತು ಅವಿನಾಶ್ ಕೈಪುಂಜಾಲ್ ಅವರು ವಯಕ್ತಿಕ ಬಹುಮಾನ ದುಕೊಂಡಿದ್ದಾರೆ.
