ಬಂಟ್ವಾಳ : ತುಳುನಾಡಿನ ನಂಬಿಕೆಯಂತೆ ದೈವದ ನುಡಿ ಪ್ರಕಾರ ಸತ್ಯ-ಧರ್ಮಉಳಿಯವಂತೆ ಧರ್ಮ ಪ್ರಜ್ಞೆಯಿಂದ ನಡೆದಾಗ ಧಾರ್ಮಿಕ ಕ್ಷೇತ್ರಗಳ ಉಳಿವು ಸಾಧ್ಯ ಎಂದು ಬಿ.ಸಿ.ರೋಡ್ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ . ತುಕಾರಾಮ ಪೂಜಾರಿ ಅವರು ಹೇಳಿದರು.
ಅವರು ರವಿವಾರ ಬಂಟ್ವಾಳ ತಾಲೂಕು ಸಿದ್ಧಕಟ್ಟೆ ಸಮೀಪದ ಎಲಿಯಮಾಗಣೆಯ ಎಲಿಯನಡುಗೋಡು ಗ್ರಾಮದ ಉಪ್ಪಿರ ಶ್ರೀ ಮೂಜಿಲ್ನಾಯ ದೈವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಧಾನ ಗೋಪುರ ಮತ್ತು ಕಾರ್ಯಾಲಯದ ಉದ್ಘಾಟನ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಭಾಷಣ ಮಾಡಿದರು.

20190505_114140
ತುಳುನಾಡಿನ ಜನತೆ ಕಲ್ಲು, ಮರ, ಗಾಳಿ, ನೀರು, ಬೆಂಕಿ ಹೀಗೆ ಪ್ರಕೃತಿಯಲ್ಲಿ ದೇವರನ್ನು ಕಂಡವರು. ಆದರೆ ಇಂದು ಅರಣ್ಯ ನಾಶದಿಂದ ಉಸಿರಾಡಲು ಶುದ್ಧ ಗಾಳಿ, ನೀರಿನ ಕೊರತೆಯಲ್ಲಿದ್ದೇವೆ. ಸ್ಥಿತ್ಯಂತರದ ಕಾಲಘಟ್ಟದಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿದೆ. ಮುಂದಿನ ಪೀಳಿಗೆ ಉಳಿಯಬೇಕಾದರೆ ಅರಣ್ಯ, ಜಲಮೂಲಗಳನ್ನು ಸಮೃದ್ಧಿಗೊಳಿಸುವ ಗಂಭೀರ ಚಿಂತನೆ ಅಗತ್ಯ ಎಂದು ಹೇಳಿದರು.
ಶ್ರೀ ಕ್ಷೇತ್ರ ಪೂಂಜದ ಆಸ್ರಣ್ಣರಾದ ಕೃಷ್ಣಪ್ರಸಾದ್ ಆಚಾರ್ಯ ಅವರು ಆಶೀರ್ವಚನ ನೀಡಿದರು. ಪ್ರಧಾನಗೋಪುರವನ್ನು ಉದ್ಘಾಟಿಸಿದ ಯಜಮಾನ ಇಂಡಸ್ಟ್ರಿಸ್ ಮಾಲಕ ಡಾ| ಟಿ. ವರದರಾಜ ಪೈ ಅವರು ಮಾತನಾಡಿ, ದೈವಾರಾಧನೆ ತುಳುನಾಡಿನ ವಿಶಿಷ್ಟತೆಯಾಗಿದ್ದು, ಜನರು ನಂಬಿದ ಸತ್ಯಗಳಾಗಿವೆ. ಜನರು ಈ ಅಲೌಕಿಕ ಶಕ್ತಿಯ ದೈವತ್ವದ ಮೇಲೆ ನಂಬಿಕೆಯ ಜೀವನ ನಡೆಸುವವರಾಗಿದ್ದಾರೆ ಎಂದು ಹೇಳಿದರು.

0505pkt1
ಕಾರ್ಯಾಲಯವನ್ನು ಉದ್ಘಾಟಿಸಿದ ಮಂಗಳೂರು ಉದ್ಯಮಿ ಸದಾನಂದ ಮೇಲಾಂಟ ಅವರು ಮಾತನಾಡಿ, ದೈವ ದೇವರ ನಂಬಿಕೆಯಿಂದ ಅನುಗ್ರಹ ಪ್ರಾಪ್ತಿಯಾಗಿ ಅಭಿವೃದ್ಧಿ ಹೊಂದುತ್ತೇವೆ ಎಂದರು. ಆಡಳಿತ ಸಮಿತಿ ಅಧ್ಯಕ್ಷ ಪ್ರಕಾಶ್ ಕೆ.ಜಂಕಳ ಅಧ್ಯಕ್ಷತೆ ವಹಿಸಿದ್ದರು. ಸಿದ್ದಕಟ್ಟೆ ವೈದ್ಯ ಡಾ| ಪ್ರಭಾಚಂದ್ರ ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿದ್ದರು.
ಆಡಳಿತ ಸಮಿತಿ ಕೋಶಾ„ಕಾರಿ, ನ್ಯಾಯವಾದಿ ಸುರೇಶ್ ಶೆಟ್ಟಿ ಪೂವಳ, ಸದಸ್ಯರಾದ ಧನಂಜಯ ಕುಮಾರ್ ನಡ್ಯೋಡಿಗುತ್ತು,ಜಗತ್ಪಾಲ ಶೆಟ್ಟಿ ಉಮನೊಟ್ಟು, ಜನಾರ್ಧನ ಬಂಗೇರ ತಿಮರಡ್ಡ, ಸದಾಶಿವ ಕುಲಾಲ್ ಉಪ್ಪಿರ, ಜಯ ನಾಯ್ಕ ಕರ್ಪೆ ಮತ್ತಿತರರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ ಸ್ವಾಗತಿಸಿದರು. ಆಡಳಿತ ಸಮಿತಿ ಸದಸ್ಯ ರವೀಂದ್ರ ಎನ್. ಪ್ರಭು ಅರಮನೆ ವಂದಿಸಿದರು. ಕಾರ್ಯದರ್ಶಿ ಉಮೇಶ್ ಹಿಂಗಾಣಿ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಚಂಡಿಕಾಯಾಗ, ಮಧ್ಯಾಹ್ನ ಸಾರ್ವಜನಿಕ ಪರ್ವ ಪೂಜೆ, ಅನ್ನ ಸಂತರ್ಪಣೆ ನಡೆಯಿತು.

By Suddi9

Leave a Reply

Your email address will not be published. Required fields are marked *