ಮೂಡುಬಿದಿರೆ: ಉತ್ತುಂಗ ಬದುಕಿನ ನಿರ್ವಹಣೆ, ಅತ್ಯಂತ ಜವಾಬ್ದಾರಿಯುತ ಜೀವನವಾದ ಗ್ರಹಾಸ್ಥಾಶ್ರಮದಲ್ಲಿ ತನ್ನ ಕುಟುಂಬಕ್ಕೆ ವಿನಿಯೋಗ ಮಾಡಬೇಕು. ಗ್ರಹಸ್ಥಾಶ್ರಮಕ್ಕೆ ಬರಲು ಆಡಂಬರವಾಗಿಯೂ ಬರಬಹುದು, ಸರಳವಾಗಿ ಬರಬಹುದು. ಸರಳ ವಿವಾಹಗಳು ಕಡಿಮೆಯಾಗುತಿದೆ.ಜೀವನದಲ್ಲೂ ಸರಳತೆ ಕಡಿಮೆಯಾಗಿದೆ.ನುಡಿ, ಶಬ್ದದ ಅರ್ಥ ಹೇಗೆ ಅನ್ಯೋನ್ಯವಾಗಿ ಇದೆಯೋ ಅದೇ ರೀತಿ ದಂಪತಿ ಇರಬೇಕು. ಆದರ್ಶ ಬದುಕು ದಂಪತಿಗಳಾಗಿರಬೇಕು. ದಾಂಪತ್ಯ ಸಂಬಂಧದ ದೊಡ್ಡ ಗುಣ ಇರುವುದು ಜಗದ್ಗುರು ಭಾರತದಲ್ಲಿರುವುದು ಮಾತ್ರ ಎಂದು ಗುರುಪುರ ಶ್ರೀವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ನುಡಿದರು.

Samuhika vivaha
ತುಳುನಾಡ ಸೇನೆ ಮೂಡುಬಿದಿರೆ ಆಶ್ರಯದಲ್ಲಿ ಭಗತ್‍ಸೇನೆ ಮೂಡುಬಿದಿರೆ ಸಹಕಾರದೊಂದಿಗೆ ಮೂಡುಬಿದಿರೆ ಪದ್ಮಾವತಿ ಕಲ್ಯಾಣಮಂಟಪದಲ್ಲಿ ಗುರುವಾರ ಐದು ಜೋಡಿಗೆ ನಡೆದ ಉಚಿತ ಸಾಮೂಹಿಕ ವಿವಾಹದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಸಮಾರಂಭವನ್ನು ಉದ್ಘಾಟಿಸಿ, ತಂದೆ, ತಾಯಿಗೆ ಗೌರವವನ್ನು ಮುಂದಿಟ್ಟು ಸಮಾಜಸೇವೆ ಮಾಡುವಂತಹ ಗುಣವನ್ನು ಹೊಂದಿರುವ ಸುರೇಶ್ ಶೆಟ್ಟಿ. ಶ್ರಮಜೀವಿಯಾಗಿ ಕಷ್ಟಪಟ್ಟು ಸಂಪಾದಿಸಿದ ಸಂಪತ್ತನ್ನು ಸಮಾಜಸೇವೆಗೆ ಮುಡಿಪಾಗಿಟ್ಟಿರುವುದು ಶ್ಲಾಘನೀಯ. ಇದೊಂದು ಮಾದರಿ ಕೆಲಸ ಎಂದರು.
ಉದ್ಯಮಿ ಕೆ.ಶ್ರೀಪತಿ ಭಟ್ ಸಮಾರಂಭದ ಅಧ್ಯಕ್ಷತೆವಹಿಸಿದರು.
ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕಸ್ತೂರಿ ಪಂಜ, ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಿಥುನ್ ರೈ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿ, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಿವಾಕರ ಶೆಟ್ಟಿ ತೋಡಾರು, ಬ್ಲಾಕ್ ಯುವ ಕಾಂಗ್ರೆಸ್ ಮೂಡುಬಿದಿರೆ ಬ್ಲಾಕ್ ಅಧ್ಯಕ್ಷ ಚಂದ್ರಹಾಸ ಸನಿಲ್, ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರ್ ಕಟೀಲ್, ಯಾದವ ಶೆಟ್ಟಿ, ಸಾಯಿ ಪೂಂಜ ಮುಂಬೈ, ಮಾಜಿ ಮೇಯರ್ ಮಿಜಾರುಗುತ್ತಉ ಶಶಿಧರ್ ಹೆಗ್ಡೆ, ತೋಡಾರು ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಸಲಾಂ, ಮೂಡುಬಿದಿರೆ-ಮೂಲ್ಕಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಸ್ಮಾನ್ ಹಾಜಿ, ವಿವೇಕ್, ಮುಖ್ಯ ಅತಿಥಿಯಾಗಿದ್ದರು.
ತುಳುನಾಡ ಸೇನೆ ಸ್ಥಾಪಕಾಧ್ಯಕ್ಷ ಸುರೇಶ್ ಶೆಟ್ಟಿ, ಅಧ್ಯಕ್ಷ ಲಕ್ಷ್ಮೀಶ ಶೆಟ್ಟಿ, ಭಗತಸೇನೆಯ ಸ್ಥಾಪಕ ಅಧ್ಯಕ್ಷ ಸುಜಿತ್ ಶೆಟ್ಟಿ, ಅಧ್ಯಕ್ಷ ಅಶೋಕ್ ಶೆಟ್ಟಿ, ಉಪಾಧ್ಯಕ್ಷ ಯೋಗೀಶ್ ಬೆದ್ರ, ಸಂದೀಪ್ ಎಂ.ಶೆಟ್ಟಿ, ಕಾರ್ಯದರ್ಶಿ ಪ್ರಜ್ವಲ್ ಆಚಾರ್ಯ, ಎರಡೂ ಸಂಘಟನೆಯ ಪದಾಧಿಕಾರಿಗಳು, ವಧು-ವರರ ಕುಟುಂಬದವರು ಉಪಸ್ಥಿತರಿದ್ದರು.
ಸನ್ಮಾನ: ನಿವೃತ್ತ ಸೈನಿಕ ರಾಜೇಂದ್ರಜೀ, ಮೂಡುಬಿದಿರೆ ಸ್ಫೂರ್ತಿ ಭಿನ್ನ ಸಾಮಥ್ರ್ಯದ ಮಕ್ಕಳ ಶಾಲೆಯ ಸ್ಥಾಪಕ ಪ್ರಕಾಶ್ ಶೆಟ್ಟಿಗಾರ್ ಹಾಗೂ ಬಂಟ್ವಾಳ ಮೇರಮಜಲು ಶ್ರೀಮಾತಾ ಲಕ್ಷಣೆ ಶಾಂತಿಧಾಮದ ಸ್ಥಾಪಕ ಕಾಂತಾಡಿಗುತ್ತು ಹರೀಶ್ ಪೆರ್ಗಡೆ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಅಥ್ಲೆಟಿಕ್ಸ್‍ನಲ್ಲಿ ಅಂತಾರಾಷ್ಟ್ರೀಯ ಸಾಧನೆ ಮಾಡಿದ ಕರಣ್ ಅವರ ಪರವಾಗಿ ತಂದೆ ವಿವೇಕ್ ಸನ್ಮಾನ ಸ್ವೀಕರಿಸಿದರು.
ಭಗತ್‍ಸೇನೆಯ ಉಪಾಧ್ಯಕ್ಷ ಯೋಗೀಶ್ ಸ್ವಾಗತಿಸಿದರು. ಪ್ರತೀಕ್ಷಾ, ಶ್ರೇಯಾ ಸನ್ಮಾನಪತ್ರ ವಾಚಿಸಿದರು. ಸಂತೋಷ್ ಸಿದ್ದಕಟ್ಟೆಕಾರ್ಯಕ್ರಮ ನಿರೂಪಿಸಿದರು. ಶ್ರೇಯಾ ವಂದಿಸಿದರು.

By suddi9

Leave a Reply

Your email address will not be published. Required fields are marked *