ಬಂಟ್ವಾಳ:ನನ್ನ ತಾಯಿಯ ತಂದೆ ಇಸ್ರೋದಲ್ಲಿದ್ದವರು. ನನಗೂ ಐಐಟಿಯಲ್ಲಿ ಕಲಿತು ಇಸ್ರೋದಲ್ಲಿ ವಿಜ್ಞಾನಿಯಾಗುವ ಆಸೆ. ಪಿಸಿಎಂಬಿ ತೆಗೆದುಕೊಂಡು ಶಾರದಾ ವಿದ್ಯಾಲಯಲದಲ್ಲಿ ಪಿಯುಸಿ ವಿಜ್ಞಾನ ವಿಷಯ ಆಯ್ಕೆ ಮಾಡುವೆ. ಡಾಕ್ಟರ್ ಆಗುವ ಆಸಕ್ತಿ ಇಲ್ಲ ಎಂದಿದ್ದಾಳೆ ಮಂಗಳವಾರ ಪ್ರಕಟಗೊಂಡ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ರಲ್ಲಿ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ಬಂಟ್ವಾಳ ವಿದ್ಯಾಗಿರಿಯ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಪಮಾ ಕಾಮತ್ .

IMG_20190430_144747

ಬಿ.ಸಿ.ರೋಡಿನ    ಕೈಕುಂಜೆಯಲ್ಲಿ  ವಾಸ್ತವ್ಯವಿರುವ ವೈದ್ಯ ದಂಪತಿ ಡಾ. ದಿನೇಶ್ ಕಾಮತ್ ಮತ್ತು ಡಾ.ಅನುರಾಧಾ ಕಾಮತ್ ಅವರ ಪ್ರಥಮ ಪುತ್ರಿ ಅನುಪಮಾ ನೃತ್ಯ, ಸಂಗೀತಗಳನ್ನೂ ಕಲಿತಿದ್ದಾಳೆ. ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದಾಳೆ. ಸದ್ಯ ಮಂಗಳೂರಿನ ಸಿಎಫ್ ಎಎಲ್ ನಲ್ಲಿ ಐಐಟಿ ಕೋಚಿಂಗ್ ಪಡೆಯುತ್ತಿರುವ ಅನುಪಮಾ ಈ ಯಶಸ್ಸಿಗೆ ಬಂಟ್ವಾಳ ವಿದ್ಯಾಗಿರಿಯ ಶಿಕ್ಷಕ, ಶಿಕ್ಷಕೇತರ ವೃಂದಕ್ಕೆ ಕೃತಜ್ಞತೆ ಸಲ್ಲಿಸಿದಳು.

ಶಾಲೆಯಲ್ಲಿ ಕೊಡುವ ಕೋಚಿಂಗ್ ಅಷ್ಟೇ ನನಗೆ ಮಾರ್ಗದರ್ಶಿ. ನನ್ನ ಸಹಪಾಠಿಗಳೊಂದಿಗೆ ಗ್ರೂಪ್ ಸ್ಟಡಿ ಮಾಡ್ತಿದ್ದೆ. ನನ್ನೊಡನೆ ಗ್ರೂಪ್ ಸ್ಟಡಿ ಮಾಡುತ್ತಿದ್ದ ಎಲ್ಲರಿಗೂ ಉತ್ತಮ ಅಂಕ ಬಂದಿವೆ ಎಂದಳು.

ಮಾರ್ಕ್ ಗಳಿಕೆಗೆಂದು ನಾವೆಂದೂ ಒತ್ತಡ ಹೇರಲಿಲ್ಲ. ಎಂಟು ಗಂಟೆ ನಿದ್ರೆ, ಓದುವ ಸಂದರ್ಭ ಶ್ರದ್ಧೆ, ಏಕಾಗ್ರತೆಯಲ್ಲಿ ಅಭ್ಯಸಿಸುತ್ತಿದ್ದ ಅನುಪಮಾ ಇಂದು ಉತ್ತಮ ಅಂಕ ಗಳಿಸಿರಲು ಆಕೆಯ ಶಾಲೆಯ ಎಲ್ಲ ಶಿಕ್ಷಕ ವೃಂದ ಮತ್ತು ಆಡಳಿತ ಮಂಡಳಿಯ ಪ್ರೋತ್ಸಾಹ ಕಾರಣ ಎಂದು ಆಕೆಯ ಹೆತ್ತವರು ತಿಳಿಸಿದರು.

By suddi9

Leave a Reply

Your email address will not be published. Required fields are marked *