ಸುದ್ದಿ 9 ಬಂಟ್ವಾಳ: ಬಂಟ್ವಾಳ ಮತ್ತು ಪಾಣೆಮಂಗಳೂರು ಯುವ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಆರಂಭಗೊಂಡ ಜಮ್ಮು ಕಾಶ್ಮೀರ ಪ್ರವಾಹ ಪೀಡಿತರಿಗೆ ‘ನಿಧಿ ಸಂಗ್ರಹಣಾ ಜಾಥ’ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು. ಪಕ್ಷ ಪ್ರಮುಖರಾದ ಕೆ.ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಆಲಿ, ಪ್ರಶಾಂತ ಕುಲಾಲ್, ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್.ಮಹಮ್ಮದ್, ವಸಂತಿ ಚಂದಪ್ಪ, ಐಡಾ ಸುರೇಶ, ಬಿ.ಎಚ್.ಖಾದರ್, ಪಿಯೂಸ್ ಎಲ್.ರಾಡ್ರಿಗಸ್, ಸುದರ್ಶನ್ ಜೈನ್ ಮತ್ತಿತರರು ಇದ್ದರು.

